ಅರವಿಂದ್ ಡೆವಲಪರ್ ವಿರುದ್ದ ಮಾಲಿಕ ಗರಂ.
ವರದಿಗಾರ: ರಾಜು ಅಗಸ್ತ್ಯ ಬೂದಿಗೆರೆ
ದೇವನಹಳ್ಳಿ:
ಅರವಿಂದ್ ಡೆವಲಪರ್ ಸುಮಾರು ರೈತ ಜನರಿಗೆ ಅನ್ಯಾಯ ಮಾಡುತ್ತಿದೆ,ಕಡಿಮೆ ಬೆಲೆ ಜಮೀನನ್ನು ಪಡೆದು ಹೆಚ್ಚು ಲಾಭವನ್ನು ಪಡೆಯುತ್ತಿದೆ.ಇದರಿಂದಾಗಿ ಬಹಳಷ್ಟು ಜನರು ಮೋಸ ಹೋಗಿದ್ದಾರೆ.ಅಲ್ಲದೇ ಕಡಿಮೆ ಬೆಲೆಗೆ ಜಮೀನು ಪಡೆದು ಅವರಿಗೆ ಸರಿಯಾದ ರೀತಿಯಲ್ಲಿ ಹಣವನ್ನು ನೀಡದೆ ಮೋಸ ಮಾಡುತ್ತಿದ್ದಾರೆ ಎಂದು ಅರವಿಂದ್ ಡೆವಲಪರ್ ಮೇಲೆ ಶ್ರೀನಿವಾಸ್ ಆರೋಪ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯಲ್ಲಿ ಇರುವಂತಹ ಅರವಿಂದ್ ಗ್ರೇಟ್ ಲ್ಯಾಂಡ್ ಅತ್ತಿರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಅರವಿಂದ್ ಡೆವಲಪರ್ ಅವರು ನನಗೆ ತುಂಬಾ ಅನ್ಯಾಯವನ್ನು ಮಾಡಿದೆ ನನ್ನ ಜಮೀನನ್ನು ಕಡಿಮೆ ಬೆಲೆಗೆ ಪಡಿದು,ನನಗೆ ಬರಬೇಕಾದ ಹಣವನ್ನು ಇನ್ನೂ ಸರಿಯಾಗಿ ಪಾವತಿ ಮಾಡಿಲ್ಲ ಇದರಿಂದಾಗಿ ನಾನು ಬಹಳ ಸಂಕಷ್ಟದಲ್ಲಿ ಇರುವೆನು.
.ಈ ಸಲುವಾಗಿ ನಾನು ಕಾನೂನಿನ ರೀತಿಯಲ್ಲಿ ಹೋರಾಟಗಳನ್ನು ಮಾಡುತಿದ್ದರು ನನಗೆ ಯಾವುದೆ ರೀತಿಯಲ್ಲಿ ಸಹಾಯವಾಗುತ್ತಿಲ್ಲ. ಇದರಿಂದ ನಾನು ಬಹಳ ಬೇಸತ್ತು ಪ್ರಾಣವನ್ನು ಬಿಡಲು ಸಿದ್ದನಾಗಿರುವೆ.ನಾನು ಬಹಳ ಜನರಿಗೆ ಸಾಲಗಾರನಾಗಿ ಬದುಕುತ್ತಿರುವೆ ಆದ್ದರಿಂದ ನನಗೆ ನ್ಯಾಯವನ್ನು ಕೊಡಿಸಿ ಎಂದರು.