ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಮಾಜಿ ಪ್ರಧಾನ ಮಂತ್ರಿ ಜವಹಾರ್ ಲಾಲ್ ನೆಹರೂ ರವರ ಪುಣ್ಯ ಸ್ಮರಣೆಹಿನ್ನಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಆಹಾರ ಸಚಿವ ಕೆ ಹೆಚ್. ಮುನಿಯಪ್ಪ ಸಲ್ಲಿಸಿದರು

ಒಳಮೀಸಲಾತಿ ಅನುಷ್ಠಾನ ಕುರಿತಾಗಿ ನಡೆಸುತ್ತಿರುವ ಸಮಗ್ರ ಸಮೀಕ್ಷೆಯಲ್ಲಿ ಎಲ್ಲಾ 101 ಜಾತಿಯ ಸಮುದಾಯದವರು ತಮ್ಮ ಮೂಲ ಜಾತಿಗಳನ್ನು ನೊಂದಾಯಿಸಬೇಕು ಆಹಾರ ಸಚಿವ ಕೆಹೆಚ್. ಮುನಿಯಪ್ಪ

ಬೆಂಗಳೂರು.ಗಾಂಧಿ ಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಾದಿಗ ಮುಖಂಡರ ಸಭೆಯನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಹಾಗೂ ಅಬಕಾರಿ ಸಚಿವರಾದ ತಿಮ್ಮಾಪುರ ತವರ ನೇತೃತ್ವದಲ್ಲಿ ನಡೆಸಲಾಯಿತು.

ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ರವರ ನೇತೃತ್ವದ ಏಕಸದಸ್ಯ ಆಯೋಗದ ನಿರ್ದೇಶನ ದಂತೆ ಸರ್ಕಾರದ ವತಿಯಿಂದ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ನಡೆಸುತ್ತಿದ್ದು ಅದರಂತೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸಮೀಕ್ಷೆ ಹೆಚ್ಚಾಗಿ ನಡೆಸಲು ಆಯಾ ಭಾಗದ ಮುಖಂಡರಿಗೆ ನಿರ್ದೇಶನ ನೀಡಿದರು.

ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೂ ಶೇಕಡ 45 ರಷ್ಟು ಸಮೀಕ್ಷೆ ನಡೆದಿದ್ದು ರಾಜ್ಯದಾದ್ಯಂತ ಶೇಕಡಾ 84 % ರಷ್ಟು ಪ್ರಮಾಣದಲ್ಲಿ ಸಮೀಕ್ಷೆಯಾಗಿದ್ದು ಸಮದಾಯದವರು ಎಲ್ಲಾರು ಸಮೀಕ್ಷೆಯಲ್ಲಿ ಭಾಗವಹಿಸಿ ಮತ್ತು ಆನ್ ಲೈನ್ ನಲ್ಲಿಯೂ ನೊಂದಣಿ ಮಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

ಮೇ 5 ರಿಂದ ಮನೆ ಮನೆಗೆ ಬೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದು ಇದೇ ತಿಂಗಳ 29 ರವರೆಗೂ ನಡೆಯಲಿದ್ದು ಆನ್ ಲೈನ್ ಮೂಲಕ ಜೂನ್ 1ರವರೆಗೂ ನೋಂದಣಿ ಮಾಡಲು ಅವಕಾಶ ಕಲ್ಪಿಸಿದ್ದು ಅದರಂತೆ ಪರಿಶಿಷ್ಟ ಜಾತಿಯ 101 ಜಾತಿಗಳ ಸಮುದಾಯದವರು ತಮ್ಮ ಮೂಲ ಜಾತಿಗಳನ್ನು ನೊಂದಾಯಿಸಲು ಮುಖಂಡರಿಗೆ ಮನವಿ ಮಾಡಿದರು.

ಇದು ಸಮುದಾಯದ ಅಳಿವು ಉಳಿವಿನ ಪ್ರಶ್ನೆ ಮಕ್ಕಳ ಭವಿಷ್ಯಕ್ಕಾಗಿ ಹಾಗೂ ಸಮುದಾಯಗಳ ಆರ್ಥಿಕ ಸಾಮಾಜಿಕ ,ಹಾಗೂ ರಾಜಕೀಯವಾಗಿ ಸಬಲರಾಗಲು ಈ ಒಳಮೀಸಲಾತಿ ಅತ್ಯಗತ್ಯ ವಾಗಿದ್ದು ಯಾರೂ ನಿರ್ಲಕ್ಷ್ಯ ಮಾಡದೇ ಸಮಗ್ರ ಸಮೀಕ್ಷೆಯಲ್ಲಿ ಭಾಗವಹಿಸಿ ಮೂಲ ಜಾತಿಗಳ ಹೆಸರನ್ನು ನೊಂದಾಯಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ,ಮಾಜಿ ಶಾಸಕ ಧರ್ಮಸೇನ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳ ಬೀಮಪ್ಪ,ತೇಗನೂರು,ಬಾಬುರಾಮ ಹುಡಬಿ,ಬೀಮಶಂಕರ್,ಮುಖಂಡರಾದ ಕೋಗಿಲು ವೆಂಕಟೇಶ್ ,ಆರ್ ಲೋಕೇಶ್,ವಿಜಯಸಿಂಹ,ಗೌತಮ್, ನಾರಾಯಣ್ ,ದೊಡ್ಡೇರಿ ವೆಂಕಟೇಶ್,ಮುತ್ತು ರಾಜ್, ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

About The Author

1 thought on “ಮಾಜಿ ಪ್ರಧಾನ ಮಂತ್ರಿ ಜವಹಾರ್ ಲಾಲ್ ನೆಹರೂ ರವರ ಪುಣ್ಯ ಸ್ಮರಣೆಹಿನ್ನಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಆಹಾರ ಸಚಿವ ಕೆ ಹೆಚ್. ಮುನಿಯಪ್ಪ ಸಲ್ಲಿಸಿದರು

Leave a Reply

Your email address will not be published. Required fields are marked *

You may have missed