ತಾವು ಉತ್ಪಾದಿಸುವ ವಸ್ತುಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಯಾಗುವ ರೀತಿಯಲ್ಲಿ ತಯಾರಿಸಬೇಕು :-ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್. ಮುನಿಯಪ್ಪ

ದಾಬಸ್ ಪೇಟೆ ಬಿಗ್ ಬ್ರೇಕಿಂಗ್ ನ್ಯೂಸ್ ಸುವರ್ಣ ಲೇಖನಿಯಲ್ಲಿ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಕಾಸಿಯಾ ಶ್ರೇಷ್ಟತಾ ಮತ್ತು ನಾವೀನ್ಯಥಾ ಕೇಂದ್ರ ಮತ್ತು ವಸ್ತು ಪ್ರದರ್ಶನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಭಾಗವಹಿಸಿದರು.
ನಂತರ ಮಾತನಾಡಿದ ಸಚಿವರು ಕೇಂದ್ರದಲ್ಲಿ ನಾನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವನಿದ್ದಾಗ ಅಂದು ಭಾರತದಾದ್ಯಂತ 20 ತಂತ್ರಜ್ಞಾನದ ತರಭೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಯಿತು ಅವುಗಳಿಂದ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಯಿತು
ದೇವನಹಳ್ಳಿಯ ಏರೋಸ್ಪೇಸ್ ಸೆಂಟರ್ ಅನ್ನು ಮಂಜೂರು ಮಾಡಿ ಅಲ್ಲಿ ಅನುಕೂಲವಾಗುವ ರೀತಿಯಲ್ಲಿ ಜಾರಿಗೊಳಿಸಿದೆ.
ರೈತರು ನಮ್ಮ ಭವಿಷ್ಯದ ಶಕ್ತಿ ಗುಣಮಟ್ಟದ ತರಬೇತಿ ಮೂಲಕ ಕೃಷಿ ಅಭಿವೃದ್ಧಿಗೆ ಬಲ
ಗ್ರಾಮೀಣ ಭಾಗದ ಬೆನ್ನೆಲುಬು ರೈತರ ಅಭಿವೃದ್ಧಿಗೆ ನವೀನ ತಂತ್ರಜ್ಞಾನ, ಗುಣಮಟ್ಟದ ತರಬೇತಿ ಮತ್ತು ಆಧುನಿಕ ಕೃಷಿ ವಿಧಾನಗಳ ಪೂರಕ ಸ್ಪಂದನೆ ನೀಡುವ ಉದ್ದೇಶದಿಂದ ತಮ್ಮ ಸಂಸ್ಥೆಯು ನಿರಂತರವಾಗಿ ಕೃಷಿ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ.
ಕೈಗಾರಿಕಾ ತರಬೇತಿ ಸಂಸ್ಥೆಗಳು ಹೆಚ್ಚಿನ ತಂತ್ರಜ್ಞಾನದ ಅಭಿವೃದ್ಧಿಗೆ ಮತ್ತು ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಗಲಿದೆ
ಈ ತರಬೇತಿ ಕೇಂದ್ರದಲ್ಲಿ ರೈತರಿಗೆ ಆಧುನಿಕ ತಂತ್ರಜ್ಞಾನ, ಎಕ್ಸ್ಪೋರ್‌ಟ್ ಗುಣಮಟ್ಟದ ಉತ್ಪಾದನೆಯು ವಿದೇಶಗಳಲ್ಲಿ ಹೆಚ್ಚು ಬೇಡಿಕೆಗೆ ಸಹಕಾರಿಯಾಗಬೇಕು ಎಂದರು. ತಾವು ಉತ್ಪಾದಿಸುವ ವಸ್ತುಗಳಿಗೆ ಬೇಡಿಕೆ ಹೆಚ್ಚಾದಾಗ ನಮ್ಮ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ.
ರೈತ ಸಮುದಾಯಕ”ನಮ್ಮ ತರಬೇತಿ ಕೇಂದ್ರದ ಉದ್ದೇಶ ರೈತರು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಉತ್ತೇಜಿಸಿ, ಎಕ್ಸ್ಪೋರ್ಟ್ ಮಟ್ಟದ ಬೇಡಿಕೆಗಳಿಗೆ ಸಜ್ಜಾಗಲು ಸಹಾಯ ಮಾಡುವುದು. ಪ್ರತಿ ರೈತನು ತಂತ್ರಜ್ಞಾನದ ಜ್ಞಾನ ಹೊಂದಬೇಕು ಮತ್ತು ಆ ಮೂಲಕ ತನ್ನ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನೂ ಸುಧಾರಿಸಬೇಕು,” ಎಂದರು.
ಈ ಸಂದರ್ಭದಲ್ಲಿ ಶಾಸಕ ಎನ್. ಶ್ರೀನಿವಾಸ್, ಕಾಸಿಯಾ ಅಧ್ಯಕ್ಷ ಎಂ.ಜಿ ರಾಜಗೋಪಾಲ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಸಾಗರ್, ಕೆಸಿಓಇ&ಐ ಅಧ್ಯಕ್ಷ ಆರ್. ಪೃಥ್ವಿರಾಜ್, ನೈಸ್ ಸಂಸ್ಥೆ ಮುಖ್ಯಸ್ಥ, ಮಾಜಿ ಶಾಸಕ ಅಶೋಕ್ ಖೇಣಿ ಮತ್ತಿತರರು ಉಪಸ್ಥಿತರಿದ್ದರು.