ಒಳಮೀಸಲಾತಿ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಆಹಾರ ಸಚಿವ ಕೆಹೆಚ್. ಮುನಿಯಪ್ಪ

ದತ್ತಾಂಶ ಸಂಗ್ರಹಣೆಗೆ ರೂಪು ರೇಶ ಸಿದ್ದಪಡಿಸಲಾಗುತ್ತಿದೆ ಯಾವುದೇ ಊಹಾ ಪೋಹಕ್ಕೆ ಒಳಗಾಗಬೇಡಿ
ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯವನ್ನು ಒದಗಿಸುತ್ತೇವೆ
ಚಾಮರಾಜನಗರ (ಹನೂರು)ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗದರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಇಂದು ಹನೂರು ತಾಲ್ಲೂಕಿನ ಬೂದಬಾಲು ಗ್ರಾಮದಲ್ಲಿ ಐತಿಹಾಸಿಕ ಹಿನ್ನಲೆಯಿರುವ ವೆಂಕಟೇಶ್ವರ ದೇವರ ದರ್ಶನವನ್ನು ಪಡೆದರು.
ನಂತರ ಗ್ರಾಮಸ್ಥರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಈ ಗ್ರಾಮದಲ್ಲಿ ಐತಿಹಾಸಿಕ ಹಿನ್ನಲೆಯ ಇರುವ ವೆಂಕಟೇಶ್ವರ ದೇವರ ದರ್ಶನ ಮಾಡಿದ್ದು ನನ್ನ ಪುಣ್ಯ ಎಂದರು ನಮ್ಮ ಸರ್ಕಾರ ಬಡವರ ಹಾಗೂ ರೈತರ ಪರವಾಗಿದ್ದು ಎಲ್ಲಾ ವರ್ಗದ ಸರ್ವತೋಮುಖ ಅಭಿವೃದ್ಧಿಗೆ ಬದ್ದವಾಗಿ ಆಡಳಿತ ನಡೆಸುತ್ತಿದ್ದೇವೆ ಎಂದರು.
ಒಳಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ನ ಮಹತ್ತದ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರಿಗೆ ಒಂದು ಸುವರ್ಣಯುಗ ಮುಂದಿನ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಈಗಾಗಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಏಕ ಸದಸ್ಯ ಆಯೋಗದ ಮೂಲಕ ಮಧ್ಯಂತರ ವರದಿ ಸಲ್ಲಿಸಿದ್ದು ನಿರ್ದಿಷ್ಟ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಠ ಜಾತಿಯ 101 ಜಾತಿಗಳ ಸಮೀಕ್ಷೆ ನಡೆಸಲು ಸಿದ್ದತೆ ನಡೆಸುತ್ತಿದ್ದು ಅತೀ ಶೀಘ್ರವಾಗಿ ದತ್ತಾಂಶದ ಸಂಗ್ರಹಣೆಯಾಗಲಿದೆ ಮುಂದಿನ ದಿನಗಳಲ್ಲಿ ಈ ಸಮುದಾಯಕ್ಕೆ ಉತ್ತಮ ದಿನಗಳು ಬರಲಿದ್ದು ಯುವಕರಿಗೆ ಉದ್ಯೋಗಗಳನ್ನು ಕಲ್ಲಿಸಲು ಸಹಕಾರಿಯಾಗಲಿದೆ ಎಂದರು.
ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಮ್ ರವರು ಈ ದೇಶದಲ್ಲಿ ಹಲವಾರು ಯೋಜನೆಗಳ ರೂಪಿಸಿದ ಪರಿಣಾಮ ಇಂದಿಗೂ ಅವರು ಅಜರಾಮರರಾಗಿದ್ದಾರೆ ಅವರು ಸೋಲಿಲ್ಲದೆ ಎಂಟು ಬಾರಿ ಸಂಸದರಾಗಿ ಆಯ್ಕೆ ಯಾದ ಕೀರ್ತಿ ಅವರಿಗೆ ಸಲ್ಲುತ್ತದೆ.
ಅವರ ನಂತರ ದಕ್ಷಿಣ ಭಾರತದಲ್ಲಿ 7 ಬಾರಿ ನನ್ನನ್ನು ತಾವು ಆಯ್ಕೆಮಾಡಿದ್ದು ತಮ್ಮ ಆಶಿರ್ವಾದದಿಂದ ನಾನು ರಾಜಕೀಯವಾಗಿ ತಮ್ಮ ಸೇವೆ ಮಾಡಲು ಸಹಕರಿಸಿದ್ದೀರ ಎಂದರು.
ಈ ಭಾಗದಲ್ಲಿ ಮಾನ್ಯ ಶಾಸಕರೊಂದಿಗೆ ಮಾತುಕತೆ ನಡೆಸಿ ರಸ್ತೆ ಹಾಗೂ ಜಗಜೀವನ್ ರಾಮ್ ಭವನದ ಕಾಮಗಾರಿ ಪೂರ್ಣಗೊಳಿಸಲು ಮಾತನಾಡುತ್ತೇನೆ ಎಂದರು.
ಈ ಭಾಗದ ಎಲ್ಲಾ ಜನರು ಶಿವಭಕ್ತ ರಿದ್ದೀರಿ ಮತ್ತು ಬಸವಣ್ಣರವರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದೀರಾ ಅದೇ ರೀತಿ ಡಾ. ಬಿ.ಆರ್.ಅಂಬೇಡ್ಕರ್ ರವರ ಕೊಟ್ಟಂತಹ ಸಂವಿಧಾನದಡಿ ಗಾಂಧೀಜಿಯವರ ಕಂಡಂತ ಕನಸನ್ನು ಈ ರಾಜ್ಯದಲ್ಲಿ ಈಡೇರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಣ್ಣ ಕೋಟೆ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಮುಖಂಡರಾದ ಮಹದೇವಪ್ಪ ಹಾಗೂ ರಮೇಶ್ ಉಪಸ್ಥಿತರಿದ್ದರು.
knxnmo
mw61rr