ಶ್ರೀರಾಮ ನವಮಿ ಮತ್ತು ಪದ್ಮಭೂಷಣ ಡಾ||ರಾಜ್ ಕುಮಾರ್ ರವರ ಜನ್ಮದಿನಾಚರಣೆ

ಪದ್ಮನಾಭನಗರ, ಗಣೇಶಮಂದಿರ ವಾರ್ಡ್ ನಲ್ಲಿ ಎಸ್.ಎಲ್.ವಿ.ಸ್ವಾದಿಷ್ಚ್ ಹೋಟೆಲ್ ಹತ್ತಿರ ಶ್ರೀರಾಮ ನವಮಿ ಅಚರಣೆ ಹಾಗೂ ಬಂದ ಭಕ್ತಾಧಿಗಳಿಗೆ ಪಾನಕ,ಮಜ್ಜಿಗೆ ಕೊಸಂಬರಿ ವಿತರಣೆ ಕಾರ್ಯಕ್ರಮ ಮತ್ತು ಮೇರುನಟ ಡಾ||ರಾಜ್ ಕುಮಾರ್ ರವರ ಜನ್ಮದಿನಾಚರಣೆ ಕಾರ್ಯಕ್ರಮ.
ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಲಕ್ಷ್ಮಿ ಉಮೇಶ್, ಗಣೇಶ ಮಂದಿರ ವಾರ್ಡ್ ಬಿಜೆಪಿ ಮುಖಂಡರಾದ ಉಮೇಶ್ ಕಬ್ಬಾಳ್ ರವರು, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಮುಖಂಡರುಗಳಾದ ಹರಿಬಾಬುರವರು, ಚೇತನ್ ಗೌಡರವರು ಶ್ರೀರಾಮನಿಗೆ ವಿಶೇಷಪೂಜೆ ಸಲ್ಲಿಸಿ, ಪಾನಕ, ಕೊಸಂಬರಿ ವಿತರಣೆ ಮಾಡಿದರು, ಪದ್ಮಭೂಷಣ ಡಾ||ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ *ಉಮೇಶ್ ಕಬ್ಬಾಳ್ ರವರು* ಮಾತನಾಡಿ ಆದರ್ಶ ಪುರುಷ, ಮಾರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮನು ಎಲ್ಲರಿಗೂ ಪೂಜೆಸುವ ಆರಾಧ್ಯ ದೈವವಾಗಿದ್ದಾರೆ.
ಕಾಶ್ಮೀರದ ಪೆಹಾಲ್ಲಾಮ್ ನಲ್ಲಿ ಉಗ್ರರ ದಾಳಿಯಿಂದ 28ಜನರು ಹುತಾತ್ಮರಾದರು ಅವರ ಕುಟುಂಬಗಳಿಗೆ ಆತ್ಮಸ್ಥೃರ್ಯ ಸಿಗಲಿ, ಹುತಾತ್ಮರಿಗೆ ಪುಣ್ಯ ಪ್ರಾಪ್ತಿಯಾಗಲಿ ಪ್ರಭು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ.
ಕನ್ನಡ ನಾಡು, ನುಡಿಯ ಉಳಿವಿಗೆ, ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಪದ್ಮಭೂಷಣ ಡಾ.ರಾಜ್ ಕುಮಾರ್ ರವರ ಚಲನಚಿತ್ರಗಳನ್ನು ನೋಡಿ ಬೆಳದವರು ನಾವು,ಸಮಾಜದ ಬದಲಾವಣೆಗೆ ಡಾ.ರಾಜ್ ಚಲನಚತ್ರಗಳು ಸಹಕಾರಿಯಾಗಿದೆ ಎಂದು ಹೇಳಿದರು.
ಶಾಲೆಯ ನೂರಾರು ಮಕ್ಕಳು ರಾಮ, ಕೃಷ್ಣ, ಲಕ್ಷ್ಮಣ ಸೀತೆ, ಆಂಜನೇಯ ವಿವಿಧ ದೇವರುಗಳ ವೇಷಭೂಷಣ ತೊಟ್ಟು ಭಾಗವಹಿಸಿದ್ದರು.
ಸ್ಥಳೀಯ ಸಾರ್ವಜನಿಕರು, ಬಿಜೆಪಿ ಮುಖಂಡರುಗಳು ಪಾಲ್ಗೊಂಡಿದ್ದರು.
v6ac1b