ಏನೇ ಇದ್ದರೂ ಹೈಕಮಾಂಡ್ ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿದೆ ಆಹಾರ ಸಚಿವ:- ಕೆಹೆಚ್. ಮುನಿಯಪ್ಪ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ.ಶಿವಕುಮಾರ್ ರವರೇ ಮುಂದುವರೆಯಲ್ಲಿದ್ದು ಅದು ನಮ್ಮ ಮಟ್ಟದಲ್ಲಿನ ಚರ್ಚೆ ಅಲ್ಲಈ ಸಮುದಾಯದ ಒಂದು ಬೇಡಿಕೆಯು ಇದ್ದು ಅದುನ್ನು ಹೈಕಮಾಂಡ್ ನೋಡಿಕೊಳ್ಳುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಭಾಂಗಣದಲ್ಲಿಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು .
ಇದೇ ತಿಂಗಳು 28 ರಂದು ಜಿಲ್ಲೆಯ ಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಿದ್ದೇನೆ ಎಂದರು.
ದಲಿತ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಮಾಧ್ಯಮಗಳು ಸೃಷ್ಟಿ ಮಾಡಿದ್ದು ಈಗಾಲೇ ಹೈಕಮಾಂಡ್ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಆಯ್ಕೆ ಮಾಡಿದ್ದು ಅವರೇ ಮುಂದುವರೆಯುತ್ತಾರೆ ಕೆಪಿಸಿಸಿ ಅಧ್ಯಕ್ಷರಾಗಿ ಮಾನ್ಯ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರೆ ಮುಂದುವರೆಯಲಿದ್ದು
ಈ ಸಂದರ್ಭದಲ್ಲಿ ಈ ಎರಡು ವಿಚಾರಗಳು ಅಪ್ರಸ್ತುತ ನಿನ್ನೆ ನಮ್ಮ ನಿವಾಸಕ್ಕೆ ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ರವರು ಉಪಹಾರಕ್ಕೆ ಬೇಟಿ ನೀಡಿದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೆಲವು ರಸ್ತೆಗಳಿಗೆ ಹಣ ಬಿಡುಗಡೆ ಮಾಡುವ ಕುರಿತು ಚರ್ಚೆ ನಡೆಸಿದ್ದೇವೆ ವಿನಃ ಬೇರೆ ರಾಜಕೀಯ ವಿಚಾರಗಳ ಬಗ್ಗೆ ಯಾವುದೇ ಚರ್ಚೆ ಯಾಗಿಲ್ಲಾ.
ಈ ರಾಜ್ಯದಲ್ಲಿ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಗಲಿ ಮುಖ್ಯಮಂತ್ರಿ ,ಉಪಮುಖ್ಯಮಂತ್ರಿ ತಮ್ಮ ಸಮುದಾಯಕ್ಕೆ ಸಿಕ್ಕಿಲ್ಲಾ ಎಂದು ಕೆಲವು ಸ್ವಾಮೀಜಿಗಳು ದ್ವನಿ ಎತ್ತುತ್ತಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವರುಈಗಾಗಲೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೆ ಇದ್ದು ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲಾ
ಎಲ್ಲಾ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ,ಆರ್ಥಿಕ ಸಮಾನತೆ ಕೊಡುವುದು ಕಾಂಗ್ರೆಸ್ ಪಕ್ಷದ ಬದ್ಧತೆ ಯಾಗಿದೆ ನಾನೆ ಹೇಳಿದ್ದೆ ಧರ್ಮ ಸಿಂಗ್ ನಂತರ ಅತ್ಯಂತ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಗಬೇಕು ಎಂದು ತದನಂತರ ಮೊದಲು ಸಿದ್ದರಾಮಯ್ಯ ರವರು ಮುಖ್ಯಮಂತ್ರಿ ಆದಾಗ ನಮ್ಮ ಪರಮೇಶ್ವರ್ ರವರು ಕೆಪಿಸಿಸಿ ಅಧ್ಯಕ್ಷರಿದ್ದಾಗ ಆಕಸ್ಮಿಕವಾಗಿ ಸೋತರು ಕೂಡ ಅವರಿಗೆ ಉಪ ಮುಖ್ಯಮಂತ್ರಿ ಮಾಡಬೇಕೆಂದು ನಾನೆ ಒತ್ತಾಯಮಾಡಿದ್ದು
ದಲಿತರಲ್ಲಿ ಯಾರಿಗಾದರು ಕೊಡಬೇಕೆಂದಿದೆ ಆದರೆ ಅದರ ಸಮಯ ಇನ್ನೂ ಬಂದಿಲ್ಲಾ….ಎಂಬುದು ಕಾಣತಿದೆ ಏಕೆಂದರೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಇರುವುದರಿಂದ ನಮ್ಮ ಹೈಕಮಾಂಡ್ ಯಾವ ಸಮಯದಲ್ಲಿ ಏನು ನಿರ್ಧಾರ ಮಾಡಬೇಕು,ಕೆಪಿಸಿಸಿ ವಿಚಾರವಿರಲಿ,ಮುಖ್ಯಮಂತ್ರಿ ವಿಚಾರವಿರಲಿ ಅವರೇ ನೋಡುತ್ತಾರೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಹಣಬಿಡುಗಡೆ ಮಾಡಬೇಕು ಎಂಬ ವಿಚಾರಗಳನ್ನು ಸತೀಶ್ ರವರೊಂದಿಗೆ ಚರ್ಚೆ ನಡೆಸಿದ್ದು ಸಾಮನ್ಯವಾಗಿ ನಾನು ಅವರ ಮನೆಗೆ ಹೋಗುತ್ತೇನೆ ಅವರು ನಮ್ಮ ಮನೆಗೆ ಕರೆದಿದ್ದೆ ಬಂದಿದ್ದಾರೆ ಇದರಲ್ಲಿ ವಿಶೇಷ ಏನುಇಲ್ಲಾ ಎಂದರು
ಈ ಸಂದರ್ಭದಲ್ಲಿ ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ಮಾಜಿ ಶಾಸಕ ವೆಂಕಟರಮಣಯ್ಯ ,ಜಿಲ್ಲಾಧಿಕಾರಿ ಬಸವರಾಜು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅನುರಾಧ,ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜಣ್ಣ,ಬಯ್ಯಪ್ಪಾ ಸದಸ್ಯರಾದ ರಾಮಚಂದ್ರಪ್ಪ, ಉಪಸ್ಥಿತರಿದ್ದರು.