ಅವಿಭಜಿತ ಜಿಲ್ಲೆಯಾದ ಕೋಲಾರಜನತೆಗೆ ಬರನೀಗಿಸಲು ಯರಗೋಳ ಡ್ಯಾಮ್ ಸಹಕಾರಿ:-ಸಚಿವ ಮುನಿಯಪ್ಪ
ಯರಗೋಳ ಡ್ಯಾಮ್ ಉದ್ಘಾಟನೆ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಉದ್ಘಾಟಿಸಿದರು,ಮಾನ್ಯ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಂಗಾರಪೇಟೆ ತಾಲ್ಲೂಕು ಯರಗೋಳ ಗ್ರಾಮದಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ 500 ಎಂ.ಸಿ.ಎಫ್.ಟಿ ಸಾಮಥ್ಯದ ಅಣೆಕಟ್ಟು ನಿರ್ಮಿಸಿ ಸದರಿ ಅಣೆಕಟ್ಟು ಮೂಲದಿಂದ ಕೋಲಾರ ನಗರ ಬಂಗಾರಪೇಟೆ, ಮಾಲೂರು ಹಾಗೂ ಮಾರ್ಗಮಧ್ಯದ 45 ಹಳ್ಳಿಗಳಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯಾಗಿದ್ದು, ಅಂದಾಜು ಮೊತ್ತ ರೂ. 160.00 ಕೋಟಿಗಳಲ್ಲಿ ನಿರ್ಮಾಣವಾಗಿದೆ.
ಕೋಲಾರ ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ ಒಂದಾಗಿದ್ದು ಕೋಲಾರ ನಗರವು ಜಿಲ್ಲೆಯ ಕೇಂದ್ರ ಸ್ಥಾನವಾಗಿದ್ದು ನಗರದಲ್ಲಿ 1,38,462 ಜನ ಸಂಖ್ಯೆ ಹೊಂದಿದೆ.
ಕೋಲಾರ ನಗರ, ಬಂಗಾರಪೇಟೆ ಮಾಲೂರು ಪಟ್ಟಣಗಳಿಗೆ ಕೊಳವೆ ಬಾವಿಗಳ ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆಯು ಖುತುಮಾನಕ್ಕೆ ಅನುಗುಣವಾಗಿ ವ್ಯಾತ್ಯಸವಾಗುವಯದರಿಂದ, ಸದರಿ ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅಬಾವವುಂಟಾಗುವುದು ಸಮನ್ಯವಾಗಿದೆ.
ಬಂಗಾರಪೇಟೆ ತಾಲ್ಲೂಕಿನ ಯರಗೋಳ ಗ್ರಾಮದಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ 500 ಎಂ.ಸಿ.ಎಫ್.ಟಿ ಸಾಮಥ್ಯದ ಅಣೆಕಟ್ಟು ನಿರ್ಮಿಸಿ ಸದರಿ ಅಣೆಕಟ್ಟು ಮೂಲದಿಂದ ಕೋಲಾರ ನಗರ ಬಂಗಾರಪೇಟೆ, ಮಾಲೂರು ಹಾಗೂ ಮಾರ್ಗಮಧ್ಯದ 45 ಹಳ್ಳಿಗಳಲ್ಲಿ ನೀರು ಸರಬರಾಜು ಮಾಡಲು ಘನ ಸರ್ಕಾರದಿಂದ 2 ಯೋಜನೆಗಳನ್ನು ಮಂಜೂರು ಮಾಡಲಾಗಿದ್ದು
ಬಂಗಾರಪೇಟೆ ಪಟ್ಟಣದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಯರಗೋಳ್ ಡ್ಯಾಂ ಅಕರ್ಷಿಣಿಯವಾಗಿದ್ದು ಹಚ್ಚಹಸಿರಿನಿಂದ ಕಂಗೋಳಿಸುವಂತಿದ್ದು, ಸುಮಾರು 1.5 ಕಿ.ಮೀ ವ್ಯಾಪ್ತಿಯವರೆಗೆ ನೀರು ವ್ಯಾಪಿಸಿದೆ.
ಎರಡು ದಶಕದಿಂದ ಯರಗೋಳ್ ಡ್ಯಾಂ ನಿರ್ಮಾಣಕ್ಕೆ ಹಲವಾರು ಅಡ್ಡಿ ಆತಂಕಗಳೂ ಎದುರಾಗಿದ್ದವು. ಈ ಅವಧಿಯಲ್ಲಿ ಅನ್ಯ ಪಕ್ಷಗಳು ಈ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮತ್ತೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಇಂದು ಯರಗೋಳ್ ಜಲಾಶಯ ಲೋಕಾರ್ಪಣೆ ಮಾಡುತ್ತಿದ್ದಾರೆ. ಇದು ಕೋಲಾರ ಜನರ ಭಾಗ್ಯವೆಂದೇ ಭಾವಿಸಿದ್ದೇನೆ.
ಈ ಯರಗೋಳ್ ಜಲಾಶಯದಿಂದ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ತಾಲೂಕುಗಳಿಗೆ ಕುಡಿಯುವ ನೀರಿನ ಬವಣೆ ನಿವಾರಣೆ ಸಾಧ್ಯ. ಇದರ ನಡುವೆ ಕೆಲವರು ಈ ಯೋಜನೆ ತಡೆಹಿಡಿಯಲು ಮತ್ತು ಮೊಟಕುಗೊಳಿಸಲು ಯತ್ನಿಸಿದ್ದರೂ ಕೋಲಾರ ಜಿಲ್ಲೆಯ ಎಲ್ಲ ಮಾಜಿ, ಹಾಲಿ ಜನಪ್ರತಿನಿಧಿಗಳು, ಸಚಿವರು, ಸಂಸದರು, ಶಾಸಕರು, ಸ್ಥಳೀಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳ ಪ್ರಯತ್ನ ಅನನ್ಯವಾದುದು. ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ಕುಡಿಯುವ ನೀರಿನ ಸಮಸ್ಯೆ ಕಾರಣ ಕೈಗಾರಿಕೆಗಳು ಇಲ್ಲಿಗೆ ಬರುತ್ತಿಲ್ಲ. ನಿರುದ್ಯೋಗ ಸಮಸ್ಯೆ ಇತ್ತು.
ಸಿದ್ಧರಾಮಯ್ಯ ಅವರ ಹಿಂದಿನ ಸರ್ಕಾರದ ಕಾಳಜಿಯಿಂದಾಗಿ ನರಸಾಪುರ ಇಂದು ಕೈಗಾರಿಕ್ ಹಬ್ ಆಗಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ಸಿಕ್ಕಿದೆ. ಅಪಸ್ವರಗಳು ಏನೇ ಇದ್ದರೂ ಕೆ.ಸಿ.ವ್ಯಾಲಿಯಿಂದಾಗಿ ನಮ್ಮ ಕೆರೆಗಳು ತುಂಬಿ ಅಂತರ್ಜಲಮಟ್ಟ ಸುಧಾರಣೆ ಆಗಿರುವುದರಿಂದ ನಮ್ಮ ರೈತರು ಪುನಃ ಕೃಷಿಯತ್ತ ಒಲವು ತೋರುವಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್, ಕೆಜಿಎಫ್ ಶಾಸಕರಾದ ರೂಪಕಲಾ ಶಶಿಧರ್,ಮಾಲೂರು ಶಾಸಕರಾದ ನಂಜೇಗೌಡ,ಉಪಸ್ಥಿತರಿದ್ದರು.