ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಮತ್ತು ಅಕ್ಕನ ಬಳಗ 60ನೇ ವರ್ಷದ ವಾರ್ಷಿಕೋತ್ಸವ
ಆಚರಿಸಿಕೊಂಡಿರುವುದು ಶ್ಲಾಘನೀಯವಾದದ್ದು. ನನ್ನ ತಾತನವರಾದ ಸಿಎಂ ವೀರಣ್ಣ ಮೇಲೂರು ಪುಟ್ಟಯ್ಯ ದೊಡ್ಡಪ್ಪಯ್ಯಣ್ಣ ಸಿ ಎನ್ ಬಸವರಾಜು ರವರ ನೇತೃತ್ವದಲ್ಲಿ ಅಕ್ಕನ ಬಳಗ ಅಸ್ತಿತ್ವಕ್ಕೆ ಬಂದಿತ್ತು . ಅಂದಿನಿಂದ ಅರವಿನ ಮನೆಯಲ್ಲಿ ಮನೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿದೆ.
ಶ್ರೀ ವೀರೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು 25 ವರ್ಷಗಳಿಂದ ವಿದ್ಯಾರ್ಥಿ ವೇತನ ಬಡ ಜನರಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿದೆ ಎಂದು ಸುಪ್ರಭಾ ಅನಿಲ್ ಕುಮಾರ್ ಪ್ರಸ್ತಾವಿಕವಾಗಿ ನುಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಗೌಧಿ ಚೌಕ ಶ್ರೀ ನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್ ಮತ್ತು ಶ್ರೀ ವೀರೇಶ್ವರ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ 352 ನೆಯ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಡಾ.ಶ್ರೀ ಜಚನಿ ಸಂಸ್ಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ವಿಮಲಾಂಬ ಅನಿಲ್ ಕುಮಾರ್ ಡಾ. ಜಚನಿ ರವರ ಸಂಸ್ಕರಣ ಬಗ್ಗೆ ಮಾತನಾಡುತ್ತಾಕನ್ನಡ ಸಾಹಿತ್ಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಲೋಕದಲ್ಲಿ ಜಚನಿ ಎಂಬ ಹೆಸರಿನಿಂದ ಪ್ರಖ್ಯಾತರಾದವರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ‍್ಯ ಸ್ವಾಮಿಗಳು (ಅಕ್ಟೋಬರ್ ೨೦, ೧೯೦೯ – ನವೆಂಬರ್ ೫, ೧೯೯೬).. ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನ ಶ್ರೀನಿಡುಮಾಮಿಡಿ ಮಠದ ಪೀಠಾಧಿಪತಿಯಾಗಿ ಪಟ್ಟಾಭಿಷಿಕ್ತರಾಗಿದ್ದ ಶ್ರೀ ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ‍್ಯ ಸ್ವಾಮಿಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಗಾಧವಾದದ್ದು ಎಂದು ತಿಳಿಯಪಡಿಸುತ್ತಾ
ಜ. ಚ. ನಿ ಅವರು ವೇದ, ಆಗಮ, ಶಾಸ್ತ್ರ, ಯೋಗ, ವ್ಯಾಕರಣ, ಉಪನಿಷತ್ತು, ವಚನ ಶಾಸ್ತ್ರ, ಭಗವದ್ಗೀತೆ, ರಾಮಾಯಣ, ಮಹಾಭಾರತ ಮುಂತಾಧ ಮಹಾಕಾವ್ಯಗಳು, ಭಾರತೀಯ ಸಂಸ್ಕೃತಿ, ಮಾನವ ಶಾಸ್ತ್ರ, ಜನಾಂಗೀಯ ಆಧ್ಯಯನ ಮುಂತಾದ ಮಾನವಿಕ ಶಾಸ್ತ್ರಗಳು – ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಸಂಪತ್ತನ್ನು ಕರಗತ ಮಾಡಿಕೊಂಡಿದ್ದ ವಿದ್ವಾಂಸರೆಂದು ಖ್ಯಾತರಾಗಿದ್ದವರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ವೀರಪ್ಪನವರು ಮಾತನಾಡುತ್ತಾ. ನಮ್ಮ ನಗರ್ತ ಜನಾಂಗಕ್ಕೆ ಇತಿಹಾಸವಿದೆ ಎಂದು ತಿಳಿಯಪಡಿಸುತ್ತಾತಂದೆ ತಾಯಿಗಳು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ನಮ್ಮ ಸಂಸ್ಕೃತಿ ಸಂಸ್ಕಾರ ಸಂಪ್ರದಾಯಗಳನ್ನು ಮನವರಿಕೆ ಮಾಡಿಕೊಳ್ಳಬೇಕು ನಮ್ಮದು ಯಾಂತ್ರಿಕ ಜೀವನ ಬದಲಿಸಿ ರುಚಿಯಾದ ರುಚಿಯಾದ ಜೀವನವನ್ನು ಕಟ್ಟಿಕೊಳ್ಳಬೇಕು. ಈ ದಿಸೆಯಲ್ಲಿ ತಂದೆ ತಾಯಿಗಳು ಮತ್ತು ಗುರುಗಳು ಪ್ರಯತ್ನಿಸಬೇಕು. ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕವಿಗಳಾದ ಮ ಸುರೇಶ್ ಬಾಬು ರವರಿಗೆ ವೀರೇಶ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು .
202324ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನೆರವು ಜನಾಂಗದ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ನಿಡುಮಾಮಿಡಿ ಮಠದ ಪೀಠಾಧ್ಯಕ್ಷರಾದ ಶಿವಾಯತ ಧರ್ಮಗುರು ಶ್ರೀ ವೀರಭದ್ರ ಚನ್ನಮಲ್ಲ ದೇಶಿ ಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ 1937 ಸರ್ಪಭೂಷಣ ಮಠದಲ್ಲಿ ಜಚನಿ ಅಕ್ಕನ ಬಳಕ ಸ್ಥಾಪನೆಯನ್ನು ಮಾಡಿದರು.
ವಿಜಯಪುರ ದಲ್ಲಿ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ಸಾಹಿತ್ಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮೂಡಿ ಬಂದಿದೆ. ಹಿಂದಿನವರ ಸಂಪ್ರೇರಣಿಯಿಂದ ಮೂಡಿಬರಲೆಂದು ತಿಳಿಸುತ್ತಾ ಮಾನವನಿಗೆ ಎರಡು ಮುಖ ಇರಬಾರದೆಂದು ತಿಳಿಸುತ್ತಾ ಶರಣರು ತಮ್ಮ ವಚನಗಳ ಮೂಲಕ ಅಂಕು ಡೊಂಕುಗಳನ್ನು ತಿದ್ದುತ್ತಿದ್ದರು. ನಾವು ಸರಳತೆಯನ್ನು ಕಾಪಾಡಿ ಕೊಳ್ಳಬೇಕು. ನೂರಾರು ಕೋಟಿ ಖರ್ಚು ಮಾಡುವ ಬದಲು ಕುಡಿಯುವ ನೀರು ವಿದ್ಯಾರ್ಥಿಗಳಿಗೆ ವೇತನ ಸಮಾಜ ಸೇವೆ ಹೆಚ್ಚಿನ ಆಧ್ಯತೆ ನೀಡಬೇಕು.ಹಿಂದಿನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ತಮ್ಮ ಸಂಪಾದನೆಯಲ್ಲಿ ಎಷ್ಟುಬೇಕೋ ಅಷ್ಟು ಬಳಸಿಕೂಂಡು ಮಿಕ್ಕಿದ ಹಣವನ್ನು ಸಮಾಜಕ್ಕಾಗಿ ವಿನಿಯೋಗಿಸಬೇಕು. ಹಳೆಜೀವನ ಮೌಲ್ಯಗಳ ಮಾಯಾವಾಗಿ ಹೊಸ ಮೌಲ್ಯಗೆ ಬದಲಾವಣೆಯಾಗಿದೆ ಎಂದು ಖೇದ ವ್ಯಕ್ತಪಡಿಸುತ್ತಾ ಹಣವಿದ್ದರೆ ಯಾವುದೇ ಸ್ಥಾನಮಾನ ಖರೀದಿ ಮಾಡಬಹುದು ನ್ಯಾಯವಾದ ಬದುಕಿನಲ್ಲಿ ಯಾವುದೇ ಸ್ಥಾನಮಾನವಿಲ್ಲ. ಮಕ್ಕಳನ್ನು ಪೋಷಣೆ ಮಾಡುವುದು ತಂದೆತಾಯಿ ರವರ ಅಂಗೈಯಲ್ಲಿ ರುತ್ತದೆ.ಜಾತಿವೆಂಬುದು ಲಾಭಗೋಸ್ಕರ ಮುಂದಿನ ದಿನಗಳು ಅಚ್ಚದಿನವಾಗಿರುಲ್ಲೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ವಿ ಅನಿಲ್ ಕುಮಾರ್ ವಹಿಸಿದರು.
ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಸಿ. ಬಸಪ್ಪ ಕೃಷ್ಣಪ್ಪ ದಾಸರು ಮೀನಾ ಮ ಸುರೇಶ ಬಾಬು ರಾಧಾ ಮನೋಹರ್ ಕೃಷ್ಣಾನಂದ್ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ವಕೀಲರಾದ ಮೂರ್ತೇಶ್ವರಯ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಚಿ ಮಾ. ಸುಧಾಕರ್ ಮಹಂತಿನ ಮಠ ಧರ್ಮ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿ ವಿಶ್ವನಾಥ್ ನಗರ್ತ ಯುವಕ ಸಂಘದ ಅಧ್ಯಕ್ಷರಾದ ಎ ಮಂಜುನಾಥ್ ಮತ್ತು ಅಕ್ಕನ ಬಳಗದ ಪದಾಧಿಕಾರಿಗಳು ಅಕ್ಕಂದಿರು ಅಣ್ಣಂದಿರು ಉಪಸ್ಥಿತರಿದ್ದರು.