ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಒಂದೆಡೆ ಬೆಳಗಾವಿಯ ಸುವರ್ಣಾ ಸೌಧದ ಮುಂದೆ ಹೋರಾಟ ಮತ್ತೊಂದೆಡೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪತ್ರಕರ್ತರ ರಾಜ್ಯ ಮಟ್ಟದ ಕಾರ್ಯಗಾರ :-ಬಂಗ್ಲೆ ಮಲ್ಲಿಕಾರ್ಜುನ,

ಆತ್ಮೀಯ ಕಾನಿಪ ಧ್ವ‌ನಿ ಬಳಗಕ್ಕೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು. ಇನ್ನೂ ಈ ಬಳಗಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೆಲ ಸದಸ್ಯರು ಸೇರ್ಪಡೆಗೊಳ್ಳಲಿದ್ದಾರೆ.

  ಮಹತ್ತರ ಉದ್ದೇಶವಾದ ಪತ್ರಕರ್ತರ ಜ್ವಲಂತ ಸಮಸ್ಯೆಗಳು ಹಾಗೂ ಪ್ರಮುಖ ಮೂಲಭೂತ  ಸೌಕರ್ಯಗಳನ್ನು, ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಪತ್ರಕರ್ತರಿಗೂ ಸಿಗಲೇಬೇಕೆಂಬ ಏಕೈಕ ಧ್ಯೇಯದೊಂದಿಗೆ ನಿಮ್ಮೆಲ್ಲರ ಸಹಕಾರದಿಂದ ಕಳೆದ ಒಂದು ವರ್ಷ ಆರು ತಿಂಗಳುಗಳಿಂದ ಹಂತ ಹಂತದ ಹೋರಾಟಗಳನ್ನು ರೂಪಿಸುತ್ತಾ ಸಾಗುತ್ತಿದ್ದು ತಮಗೆಲ್ಲಾ ತಿಳಿದಂತ ವಿಚಾರ

. ಯಾವುದೇ ಸೌಕರ್ಯಗಳನ್ನು ಸರ್ಕಾರದಿಂದ  ಪಡೆಯಬೇಕಾದರೆ ಕಠಿಣ ಪರಿಶ್ರಮದ ಹೋರಾಟಗಳು ಹಾಗೂ ತನ್ನದೇ ಆದ ಸಮಯ ಬೇಕೇ ಬೇಕು.

ಈ ವಿಚಾರದಲ್ಲಿ ನಮ್ಮ ಸಂಘದ ಗುರಿ ಸ್ಪಷ್ಟವಾದ ದಿಕ್ಕಿನತ್ತಾ ಸಾಗಿದೆ ಜೊತೆಗೆ ರಾಜ್ಯದ ಪತ್ರಕರ್ತರ ದೊಡ್ಡ ಸಂಘಟನೆ, ವರದಿಗಾರರ ಪರ ಧ್ವನಿ ಇಂದಿನವರೆಗೂ ಎತ್ತಿಲ್ಲ ಹಾಗೂ ಮುಂದೆಯೂ ಧ್ವನಿ ಎತ್ತುವುದಕ್ಕೆ ಸಾಧ್ಯವಿಲ್ಲ.

ಸರ್ಕಾರ ಹಾಗೂ ಬಂಡವಾಳಶಾಹಿಗಳ ಬಕೀಟ್ (BE ಹಿಡಿಯುವುದು) ಹಿಡಿಯುವುದರಲ್ಲೇ ಹಲವಾರು ವರ್ಷಗಳು ಕಳೆದು ಹೋಗಿದ್ದರೂ ಇಂದಿನವರೆಗೂ ಮಂಕುಬೂದಿಯನ್ನು  ವರದಿಗಾರರಿಗೆ ಎರಚುತ್ತಾ ಬಂಡವಾಳಶಾಹಿಗಳಿಂದ ಪೇಸ್ಲಿಫ್ ಆಗಲಿ,ಸರ್ಕಾರದಿಂದ ಉಚಿತ ಬಸ್ ಪಾಸ್ ಆಗಲಿ ಇಲ್ಲಿಯವರೆಗೆ ಕೊಡಿಸದೇ ಅಂಧಕಾರದಲ್ಲಿ ಇಡುವುದರ ಮುಖಾಂತರ ಮಾಸಾಶನ ವಂಚಿತರನ್ನಾಗಿ ಮಾಡಿಕೊಂಡು ಬಂದಿರುವುದೇ

ಇಲ್ಲಿಯವರೆಗಿನ  ಬಹು ದೊಡ್ಡ ಸಾಧನೆ. ನಮ್ಮ ಸಂಘಟನೆ ಆ ಹಾದಿಯಲ್ಲಿ ಸಾಗದೇ ಇಂದಿಗೂ ಇನ್ನೆಂದಿಗೂ ಪತ್ರಕರ್ತರ ಸಮಾಧಿಗಳ ಮೇಲೆ ಸೌಧ ಗಳನ್ನು ಕಟ್ಟದೇ ವಾಸ್ತವಿಕ   ಸನ್ಮಾರ್ಗದಲ್ಲಿ ಹೋರಾಟ ಗಟ್ಟಿಗೊಳಿಸುತ್ತಾ ದಿನಾಂಕ,:-13/12/2023 ರಂದು ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಬೆಳಗಾವಿಯ ಸುವರ್ಣಾ ಸೌಧದ ಮುಂದೆ

ನಮ್ಮ ಕಾನಿಪ ಧ್ವನಿ ವತಿಯಿಂದ ಪ್ರತಿಭಟನೆ ಧರಣಿಯನ್ನು ಹಮ್ಮಿಕೊಂಡಿದ್ದು ಪದಾಧಿಕಾರಿಗಳು ಹಾಗೂ ಸದಸ್ಯರು ಈ ಐತಿಹಾಸಿಕ ಹೋರಾಟದಲ್ಲಿ ಭಾಗಿಗಳಾಗುವುದರ ಮುಖಾಂತರ ಸಿದ್ದರಾಮಣ್ಣನ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿ.


ಸರ್ಕಾರಕ್ಕೆ ಕೊಟ್ಟಂತ ಗಡುವು ಡಿಶೆಂಬರ್ 2023 ರವರೆಗೆ ಇದ್ದು, ಇದರ ನಂತರ ನಮ್ಮ ಸಂಘಟನೆ ವತಿಯಿಂದ ಜನವರಿ 2024 ರಿಂದ ಹೈಕೋರ್ಟ್ ನಲ್ಲಿ ರಿಟ್ ಫೈಲ್ ಮಾಡುವುದರ ಮುಖಾಂತರ ಸರ್ಕಾರಕ್ಕೆ ಬಿಸಿ ತಾಕಿಸುವುದರೊಂದಿಗೆ ನ್ಯಾಯ ಪಡೆಯುವ ನಿಟ್ಟಿನಲ್ಲಿ.


ಒಂದೆಡೆ ರಾಜ್ಯ ಮಟ್ಟದ ಪತ್ರಕರ್ತರ ಕಾರ್ಯಾಗಾರ,ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಧ್ವನಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ:-23/12/2023 ರಂದು ಒಂದು ದಿನದ ಪೂರ್ತಿ ಕಾರ್ಯಕ್ರಮ ಆಯೋಜನೆ ಮತ್ತೊದೆಡೆ ದಿನಾಂಕ:-13/12/2023 ರಂದು ಬೆಳಗಾವಿಯ ಸುವರ್ಣಾ ಸೌಧದ ಮುಂದೆ ಧರಣಿ

ಇವೆರೆಡು ಕಾರ್ಯಕ್ರಮವು ನಿಜಕ್ಕೂ ಸವಾಲಿನ ವಿಚಾರವಾದರೂ,ಸರ್ಕಾರದಿಂದ ಒಂದು ಪೈಸೆ ನೂ ಸಹಾಯ ಹಸ್ತವಿಲ್ಲ ಜೊತೆಗೆ ಸಂಘದಲ್ಲೂ ಆರ್ಥಿಕ ತೊಂದರೆ ಮಧ್ಯ ಯಶಸ್ವಿ ಮಾಡಲೇಬೇಕೆಂಬ ಸವಾಲಿನೊಂದಿಗೆ ನಿಮ್ಮಗಳ ಸಹಕಾರದೊಂದಿಗೆ ಹಗಲಿರುಳು ಶ್ರಮಿಸುತ್ತಾ.

ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವ‌ನಿ ಸಂಘಟನೆ. ಮೊ:- 9535290300

Leave a Reply

Your email address will not be published. Required fields are marked *

You may have missed