ದೇವನಹಳ್ಳಿ ವರದಿ,,ಬ್ರಿಗೇಡ್ ಬಡಾವಣೆಯ ಅಂಗಳದಲ್ಲಿ ಕನ್ನಡ ರಾಜ್ಯೋತ್ಸವವನ್ನುಅದ್ದೂ
ರಿಯಾಗಿ ಆಚರಣೆ.
ನಮ್ಮ ಯುವ ಪಿಳಿಗೆಯು ಶಕ್ತಿಶಾಲಿಯಾಗಿದ್ದು ಅವರಿಗೆ ನಮ್ಮ ಭಾಷೆ, ಸಂಸ್ಕ್ರತಿಯ ಬಗ್ಗೆ ಹೆಚ್ಚಾನದಾಗಿ ತಿಳಿಸಿಕೊಡುವು ನಮ್ಮಜವಬ್ದಾರಿ
ಯಾಗಿರುತ್ತದೆ ಆದ್ದರಿಂದ ಕನ್ನಡದ ಕಂಪನ್ನು ಅವರಲ್ಲಿ ಹೆಚ್ಚಿಸಬೇಕು ಆದ ಇದೇ ತಿಂಗಳು 26 ರಂದು ದೇವನಹಳ್ಳಿ ಬಳಿ ಇರುವಂತಹ ಬ್ರಿಗೇಡ್ ಬಡಾವಣೆಯ ಅಂಗಳದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಕನ್ನಡ ಅಭಿಮಾನಿ
ಗಳ ಸಂಘ ಹಾಗೂ ಬ್ರಿಗೇಡ್ ಆರ್ಚಡ್ಸ್ ಸಂಘ
ದ ಅಧ್ಯಕ್ಷ ಡಾ.ಸಿ.ವಿ ನವೀನ್ ಕುಮಾರ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ
ಪಟ್ಟಣದಲ್ಲಿ ಇದರ ಸಲುವಾಗಿ ನಡೆದ ಪತ್ರಿಕಾ
ಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ತಿಂಗಳು 26 ರಂದು ಬ್ರಿಗೇಡ್ ಅರ್ಚಡ್ಸ್ ನಲ್ಲಿ ಕನ್ನಡ ಅಭಿಮಾನಿಗಳ ಸಂಘ ಬ್ರಿಗೇಡ್ ಆರ್ಚಡ್ಸ್ ನಲ್ಲಿ ಮೊದಲನೆಯ ಬಾರಿ 68ನೇ ಕನ್ನಡ ರಾಜ್ಯೋತ್ಸವ ಸಲುವಾಗಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ಕಾರ್ಯ
ಕ್ರಮ ನಡೆಸಲಾಗುತ್ತಿದೆ. ಇದರ ಪ್ರಯುಕ್ತ ಶನಿ
ವಾರ ಶನಿವಾರದಂದು ರಾಮಯ್ಯ ಲೀನ ಆಸ್ಪತ್ರೆಯ ವತಿಯಿಂದ ರಕ್ತದಾನ ಶಿಬಿರ,ಸ್ತ್ರೀ
ಯರಿಗೆ ರಂಗೋಲಿ ಸ್ಪರ್ಧೆ ,ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.ಇನ್ನೂ ನವೆಂಬರ್ 26 ಭಾನುವಾರ ಬೆಳಗ್ಗೆ 9 ಗಂಟೆಗೆ ಕನ್ನಡ ಬಾವುಟದ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ಕಲಾ ತಂಡದೊಂದಿಗೆ ಭುವನೇಶ್ವರಿ ತಾಯಿಯ ಮೆರವಣಿಗೆ , ಸಂಭ್ರಮ ಸಡಗರದ ಸಾಂಸ್ಕೃತಿಕ ಕಲಾ ಉತ್ಸವ, ವಸ್ತು ಪ್ರದರ್ಶನದ ಮಳಿಗೆಗಳು ಇರಲಿವೆ ಆದ್ದರಿಂದ ದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಜನತೆ ಬಂದು ನಮ್ಮ ಈ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಬರಮಾಡಿಕೊಂಡಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಬ್ರಿಗೇಡ್ ನ , ಬ್ಯಾನಿ
ಯನ್ ಬ್ಲಾಕ್ ಅಧ್ಯಕ್ಷ ನಾರಾಯಣಗೌಡ,
ಸಡಾರ್ ಬ್ಲಾಕ್ ಅಧ್ಯಕ್ಷ ರಾಜೇಶ್ ಚೌದರಿ,
ಡಿಯೋಡರ್ ಬ್ಲಾಕ್ ಅಧ್ಯಕ್ಷ ಯಶೋಧನಾಗ
ರಾಜು,ಪ್ರಧಾನ ಕಾರ್ಯದರ್ಶಿ ಮಾಲಾ,
ಕಾರ್ಯದರ್ಶಿ ವನಿತಾ ವಿಜಯ್ ಮತ್ತಿತ್ತರರು ಹಾಜರಿದ್ದರು.