ಸರ್ಕಾರಿಬಸ್ಸುಗಳಲ್ಲಿಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಆಹಾರ ಮತ್ತು
ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಸಚಿವರಿಂದ ಚಾಲನೆ.
ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಶಕ್ತಿ ಯೋಜನೆ ಸಹಕಾರಿ .ಜಿಲ್ಲಾ ಉಸ್ತುವಾರಿ ಸಚಿವರಾದಕೆ.ಹೆಚ್.ಮುನಿಯಪ್ಪ ಅಭಿಮತ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹಿಳೆಯರು ಸ್ವಾವಲಂ
ಬಿಗಳಾಗಿ ಬದುಕಲು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಉಚಿತ ಪ್ರಯಾಣ ನಮ್ಮಪ್ರಮಾಣ
ಎಂಬ ಘೋಷ ವಾಕ್ಯದೊಂದಿಗೆ ಶಕ್ತಿಯೋಜನೆ
ಯನ್ನು ಜಾರಿಗೆ ತರಲಾಗಿದ್ದು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿ
ತ, ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಬಳ್ಳಾಪುರ ಸಂಯುಕ್ತಆಶ್ರಯದಲ್ಲಿ ಕರ್ನಾಟಕ ರಾಜ್ಯಾದ್ಯಂ
ತ ನಗರ ಸಾರಿಗೆ ಸಾಮಾನ್ಯ ಹಾಗೂವೇಗದೂತ
ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಕಾರ್ಯಕ್ರ
ಮವನ್ನು ಉದ್ಘಾಟಿಸಿಅವರು ಮಾತನಾಡಿದರು
ಮಹಿಳೆಯರಿಗೆ ಸಮಾಜದಲ್ಲಿ ಸ್ವಾವಲಂಬಿ
ಬದುಕು ಕಲ್ಪಿಸಲು ವಿದ್ಯಾಭ್ಯಾಸ, ವಿವಿಧ ಸೌಲ
ಭ್ಯಗಳನ್ನು ಒದಗಿಸಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸದಾ ಬದ್ಧವಾಗಿರುತ್ತದೆ ಈ ನಿಟ್ಟಿನಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿಕೊಡಲು *ಶಕ್ತಿ ಯೋಜನೆ* ಯನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಪ್ರತಿ
ಯೊಬ್ಬ ಮಹಿಳೆಗೆ ಯಾವುದೇ ರೀತಿಯ ತಾರತ
ಮ್ಯ ಇಲ್ಲದೆ ಈ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದೇ
ವೆ ಇದರಿಂದ ಮಹಿಳೆಯರ ಸರ್ವತೋಮುಖ
ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
ಮಹಿಳೆಯರು ಸರ್ಕಾರದಿಂದ ನೀಡಿರುವ ಆಧಾರ್ ಕಾರ್ಡ್
ವೋಟರ್ ಐಡಿ ಮುಂತಾದ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಬಹುದು. ಮೂರು ತಿಂಗಳ ಒಳಗಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಲಾಗುವುದು ನಂತರಕರ್ನಾಟಕ ವ್ಯಾಪ್ತಿ
ಯಲ್ಲಿ ಉಚಿತವಾಗಿ ಎಲ್ಲಿಗೆ ಬೇಕಾದರೂಸಂಚ
ರಿಸಬಹುದು. ಈ ಶಕ್ತಿ ಯೋಜನೆಯು ರಾಜ್ಯದ ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ ಎಂದರು.
ನಂತರ ಸ್ವತ: ಸಚಿವರೇಮಹಿಳೆಯರಿಗೆ ಉಚಿತ ಬಸ್ ಟಿಕೆಟ್‌ಅನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಚಿಕ್ಕಬ
ಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ಹಿರೇಮಠ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಶಕ್ತಿ ಯೋಜನೆಯ ಪ್ರಮುಖ ಅಂಶಗಳನ್ನು ವಿವರಿಸುತ್ತಾ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರು. ಎಲ್ಲಾ ಮಹಿಳೆಯರಿಗೆ ರಾಜ್ಯದೊಳ
ಗಿನ ಪ್ರಯಾಣಕ್ಕೆ ಮಾತ್ರ ಅನ್ವಯವಾಗುತ್ತದೆ. ಅಂತರ್ ರಾಜ್ಯ ಪ್ರಯಾಣಕ್ಕೆ ಅವಕಾಶವಿರುವು
ದಿಲ್ಲ. ರಾಜ್ಯದ ನಗರ, ಸಾಮಾನ್ಯ ಹಾಗೂವೇಗ
ದೂತ ಬಸ್ಸುಗಳಲ್ಲಿ ಪ್ರಯಾಣಿಸಬಹುದು.ಐಶಾ
ರಾಮಿ ಸಾರಿಗೆಗಳಲ್ಲಿ ಈ ಸೌಲಭ್ಯ ಇರುವುದಿಲ್ಲ
ಇ.ಟಿ.ಎಂ ತಂತ್ರಾಂಶದ ಮೂಲಕ ಉಚಿತ ಟಿಕೆ
ಟ್ ವಿತರಣೆಗೆ ಅಗತ್ಯ ಮಾರ್ಪಾಡುಗಳನ್ನು ಮಾಡಿದ್ದು ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಗುರುತಿನ ಚೀಟಿ ಪರಿಶೀಲನೆ ನಡೆಸಿ ಶೂನ್ಯ ಟಿಕೆಟ್ ವಿತರಿಸಲಾಗುವುದು.
ಅನಿವಾರ್ಯ ಸಂದರ್ಭದಲ್ಲಿ ಇ ಟಿ ಎಂ ನಲ್ಲಿ ತಾಂತ್ರಿಕ ದೋಷ ಕಂಡು ಬಂದಲ್ಲಿ ಮ್ಯಾನುಯ
ಲ್ ರೀತಿಯ ಟಿಕೆಟ್ ವಿತರಿಸಲು ಕ್ರಮ ವಹಿಸ
ಲಾಗುವುದು. ಮುಂಗಡ ಬುಕಿಂಗ್ ಸೌಲಭ್ಯ ಇರುವ ಬಸ್ಸುಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಿ ಕ್ರಮ ಕೈಗೊಳ್ಳಲಾಗಿದೆ. ಸೇವಾ ಸಿಂಧು ತಂತ್ರಾಂಶದ ಮೂಲಕ 2023ರ ಜೂನ್ 15ನೇ ತಾರೀಖಿನಿಂ
ದ ಅರ್ಜಿಗಳನ್ನು ಸಲ್ಲಿಸಬಹುದು. ಮುಂದಿನ ಮೂರು ತಿಂಗಳೊಳಗೆ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಗುವುದು.
ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಭಾರತ ಸರ್ಕಾರ, ಕರ್ನಾಟಕ ಸರ್ಕಾರದಿಂದ ವಿತರಿಸಿದ ಭಾವಚಿ
ತ್ರ ಹಾಗೂ ವಾಸಸ್ಥಳ ಇರುವ ಗುರುತಿನ ಚೀಟಿ
ಯನ್ನು ಶೂನ್ಯ ಟಿಕೆಟ್ ವಿತರಣೆ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ R.
ಲತಾ ಮೇಡಂ,ದೊಡ್ಡಬಳ್ಳಾಪುರ ಉಪ ವಿಭಾ
ಗಾಧಿಕಾರಿ ತೇಜಸ್ ಕುಮಾರ್, ತಹಸೀಲ್ದಾರ್ ಶಿವರಾಜ್, ತಾಲೂಕು ಪಂಚಾಯತ್ ಕಾರ್ಯ
ನಿರ್ವಾಹಕ ಅಧಿಕಾರಿ ವಸಂತ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತ ಸಿ.ಬಾಲಕೃಷ್ಣ
ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಜಿ ಸಂಸದರಾದ ಸಿ.ನಾರಾ
ಎಯಣಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ರಾಜಣ್ಣ, ಮಾಜಿ ಪುರಸಭಾ ಅಧ್ಯಕ್ಷರಾದ ಜಗನ್ನಾಥ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಂನಂತಕುಮಾರಿ. ಮುಂತಾದವರು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಬ
ಳ್ಳಾಪುರ ವಿಭಾಗ ಪ್ರಭಾರ ಪಾರು ಪತ್ತೇಗಾರ
R.B. ಈರೇಮಠ್ ರವರು,ವಿಭಾಗಿಯ ಸಂಚಾ
ರಾಧಿಕಾರಿ ಮಂಜುನಾಥ್ ರವರು,ಸಹಾಯಕ
ಲೆಕ್ಕಾಧಿಕಾರಿಗಳಾದ ಮುರಳಿಮೋಹನ್.
ಕೆ.ಪಿ.ಸಿ.ಸಿ ಸದಸ್ಯ ದ್ಯಾವರಹಳ್ಳಿ ಶಾಂತಕುಮಾ
ರ್,ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ನಾಗೇಶ್ , ಕಾಂಗ್ರೆಸ್ ಮುಖಂಡರುಗಳಾದ ವೇಣುಗೋಪಾಲ್,
ನಾಗೇಗೌಡ, ವಿಜಯಪುರ ಹೋಬಳಿಯ ಬ್ಲಾಕ್ ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರವೀರೇಗೌಡ, ಮಹಿಳಾ ಘಟಕದ ಅಧ್ಯಕ್ಷ ರಾಧಾ ರೆಡ್ಡಿ ,
ದೇವನಹಳ್ಳಿ ಬ್ಲಾಕ್ ಮಹಿಳಾ ಘಟಕ ಕಾರ್ಯ
ಧರ್ಶಿ ಮಾದೇವಿ,ಮಹಿಳಾ ಘಟಕದ ಸವಿತಾ
ವೆಂಕಟಸ್ವಾಮಿ,ಪಾರುಶಿವರಾಜ್,ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತ
ರು,ಮಹಿಳಾ ಘಟಕ ತಾಲ್ಲೂಕು ,ಜಿಲ್ಲಾ,ಅಧಿಕಾ
ರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.