ಬಮೂಲ್ ಚುನಾವಣೆ: ದೇವನಹಳ್ಳಿ ಮುಖಂಡರೊಂದಿಗೆ ಸಭೆ – ಶ್ರೀನಿವಾಸ್ ಗೆಲುವಿಗೆ ನಿಸರ್ಗ ನಾರಾಯಣಸ್ವಾಮಿ ಕರೆ

ಬೆಂಗಳೂರು ಮೇ 25 ರಂದು ನಡೆಯಲಿರುವ ಬಮೂಲ್ ಚುನಾವಣೆ ಹಿನ್ನೆಲೆಯಲ್ಲಿ, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ದೇವನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮತ್ತು ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವನಹಳ್ಳಿ ತಾಲ್ಲೂಕಿನ ಜನರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ ಈ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.
ಬಮೂಲ್ ನಿರ್ದೇಶಕರ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಿ ನಿಂದ ಶ್ರಮಿಸುವಂತೆ ನಾರಾಯಣಸ್ವಾಮಿ ಮನವಿ ಮಾಡಿದರು.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಮತ್ತು ಪುರಸಭೆ ಚುನಾವಣೆಗಳಿಗೆ ಈ ಚುನಾವಣೆ ದಿಕ್ಸೂಚಿಯಾಗಲಿದೆ.
ಶ್ರೀನಿವಾಸ್ ಅವರು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಸುಮಾರು 11 ವರ್ಷಗಳಿಂದ ನಿರಂತರ ಸಂಪರ್ಕದಲ್ಲಿದ್ದು, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾರೆ. ಹೆಚ್ಚು ಅನುಭವ ಇರುವ, ರೈತರ ಹಿತವನ್ನು ಕಾಪಾಡಲು ಬದ್ಧರಾಗಿರುವ ಶ್ರೀನಿವಾಸ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡುವಂತೆ ನಾರಾಯಣಸ್ವಾಮಿ ಕೋರಿದರು. ತಮ್ಮ ಶಾಸಕ ಅವಧಿಯಲ್ಲಿಯೂ ಸಹ ಸಹಕಾರ ಸಂಘಗಳ ಅಭಿವೃದ್ಧಿಗೆ ಅನೇಕ ಅನುದಾನಗಳನ್ನು ನೀಡಿದ್ದೇನೆ ಎಂದು ಅವರು ಇದೇ ವೇಳೆ ನೆನಪಿಸಿಕೊಂಡರು.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಬಿ. ಮುನೇಗೌಡ, ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾದ ಆರ್. ಮುನೇಗೌಡರು, ಮುಖಂಡರಾದ ಜಿ.ಎ. ರವೀಂದ್ರ, ಮಂಜುನಾಥ್, ಮುನಿರಾಜ್, ವೀರಪ್ಪ, ಎಸ್.ಎಲ್.ಎನ್. ಮುನಿರಾಜ್, ಜಗದೀಶ್, ಟಿ. ರವಿ, ವೆಂಕಟೇಶ್ ಸೇರಿದಂತೆ ಅನೇಕ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
iAoEkO PHdqxtFg SyrAhkz
cu7ssx