ಕೊಡಿಗೇಹಳ್ಳಿಯಲ್ಲಿನ ಆಟಿಸಂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭರವಸೆಯ ಬೆಳಕು ಆಹಾರ ಸಚಿವ ಕೆಹೆಚ್. ಮುನಿಯಪ್ಪ

ಆಚಾರ್ಯ ಜ್ಞಾನ ಸಂಗಮ ಟ್ರಸ್ಟ್®️ ಸ್ಥಾಪಿಸಿರುವ ಫ್ಯೂಚರ್ ಫೌಂಡೇಶನ್ ಅಕಾಡೆಮಿ ಫಾರ್ ಆಟಿಸಂ ಎಕ್ಸಲೆನ್ಸ್ (Future Foundation Academy for Autism Excellence) ಇಂದು ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಉದ್ಘಾಟನೆಗೊಂಡಿತು. ಈ ಮಹತ್ವದ ಕಾರ್ಯಕ್ರಮವನ್ನು ಮಾನ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.
ಸಂಸ್ಥೆಯ ಮುಖ್ಯ ಉದ್ದೇಶ ಆಟಿಸಂ ಇರುವ ಮಕ್ಕಳಿಗೆ ಶ್ರೇಷ್ಠ ಶಿಕ್ಷಣ, ವೈಯಕ್ತಿಕ ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಜೀವನಕ್ಕೆ ತಯಾರಿಸಲು ಸಹಾಯ ಮಾಡುವುದಾಗಿದೆ. ಆಟಿಸಂ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಸ್ವತಂತ್ರವಾಗಿ ಜೀವನ ನಡೆಸುವಂತಾಗಿಸಲು ಈ ಅಕಾಡೆಮಿ ಸದಾ ಶ್ರಮಿಸಲಿದೆ ಈ ವೇಳೆ ಮಾತನಾಡಿದ ಸಚಿವರು
“ಸಮಾಜವು ಆಟಿಸಂ ಮಕ್ಕಳನ್ನು ಅರ್ಥಮಾಡಿಕೊಳ್ಳಲು ಮತ್ತು ಬೆಂಬಲಿಸಲು ಇಂತಹ ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಅಪಾರ. ಈ ಸಂಸ್ಥೆ ಆಟಿಸಂ ಮಕ್ಕಳ ಭವಿಷ್ಯಕ್ಕೆ ದಾರಿ ತೋರಿಸುವ ಬೆಳಕಾಗಲಿದೆ,” ಎಂದು ಹೇಳಿದರು.
ಟ್ರಸ್ಟ್‌ನ ಅಧ್ಯಕ್ಷರು ಮಾತನಾಡುತ್ತಾ,
“ನಮ್ಮ ಗುರಿ ಆಟಿಸಂ ಮಕ್ಕಳಿಗೆ ಸಮಾನ ಅವಕಾಶ ನೀಡುವುದು ಮಾತ್ರವಲ್ಲದೆ, ಅವರಿಗೆ ಅಗತ್ಯವಿರುವ ಶೈಕ್ಷಣಿಕ ಮತ್ತು ನೈಪುಣ್ಯ ತರಬೇತಿಗಳನ್ನು ಒದಗಿಸಿ, ಅವರನ್ನು ಸಮಾಜದ ಮುಖ್ಯ ಅಂಗವನ್ನಾಗಿ ರೂಪಿಸುವುದು,” ಎಂದು ವಿವರಿಸಿದರು.
ಈ ಸಂದರ್ಭದಲ್ಲಿ
ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಯಾನಂದ,
ಡಾ. ನಂದಿನಿ ಮುಂಡ್ಕೂರು, ಡಾ. ಚಿತ್ತ್ರಾ ಶಂಕರ, ಡಾ. ಜಯಕುಮಾರ್, ಶ್ರೀಮತಿ ರೇಣುಕಾ ಜ್ಯೋತಿಸ್ವರೂಪಿನ್, ಶ್ರೀಮತಿ ಪ್ರಿಯಾ ಕನ್ನನ್, ಶ್ರೀಮತಿ ಮೌನಾ ಸಿದ್ದಪ್ಪ, ಡಾ. ಗೋವಿಂದರಾಜು, ಶ್ರೀ ಎಂ. ಎಸ್. ಸುಂದರ್ ರಾಮ್, ಡಾ. ವರೂಣ್ ದೇವದಾಸ್ ಹಾಗೂ ಇತರ ಗಣ್ಯರು ಮತ್ತು ಹಲವಾರು ಸ್ಥಳೀಯ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
1535bx