ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ನಮಗೆ ನ್ಯಾಯ ಸಿಗುವವರೆಗೂ ಪಕ್ಷಾತೀತವಾಗಿ ಎಲ್ಲಾ ನಾಯಕರೂ ಒಟ್ಟಾಗಿರಬೇಕು:-ಆಹಾರ ಸಚಿವ ಕೆಹೆಚ್. ಮುನಿಯಪ್ಪ

ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುವೆ
ಒಳ ಮೀಸಲಾತಿ ಅನುಷ್ಠಾನ ಮಾಡಿಯೇ ತೀರುತ್ತೇವೆ ಇದರಲ್ಲಿ ಯಾವುದೇ ಸಂಶಯ ಬೇಡ
ವಿಜಯನಗರ.6


ಶ್ರೀ ಮಾದಾರಚನ್ನಯ್ಯ ಸೇವಾ ಸಮಿತಿಯ ದ್ವಿತೀಯ ಸಮಾವೇಶದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪ ನವರು ಭಾಗವಹಿಸಿದರು.

ಹೊಸಪೇಟೆಯ ಎ ಅರ್ ಎಸ್ ಹೋಮ್ ಸ್ಟೇ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಸಚಿವರು

ಪರಿಶಿಷ್ಟ ಜಾತಿಯ ಎಡ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುಲು ನಾವು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಎಲ್ಲಿಯವರೆಗೂ ನಮ್ಮ ಸಮುದಾಯದ ಯಾವುದೇ ಪಕ್ಷದ ನಾಯಕರಿರಲಿ ಒಗ್ಗಟ್ಟಾಗಿರುವುದಿಲ್ಲವೋ ಅಲ್ಲಿಯವರೆಗೂ ನಮಗೆ ನ್ಯಾಯ ಸಿಗುವುದಿಲ್ಲಾ

ಈ ಸಮುದಾಯದ ಪರವಾಗಿ ನಾನು 1991 ರಿಂದ 7 ಬಾರಿ ಸಂಸದನಾಗಿ ನಾನು ಪ್ರಯತ್ನವನ್ನು ಪಡುತ್ತಿದ್ದು ಅಂದಿನ ಪ್ರಧಾನ ಮಂತ್ರಿಗಳಾದ ಪಿವಿ.ನರಸಿಂಹರಾವ್ ,ವಾಜಿಪೇಯಿ,ಮನಮೋಹನ್ ಸಿಂಗ್ ರವರಿಗೆ ನಮ್ಮ ಸಮುದಾಯದ ಎಲ್ಲಾ ಸಂಸದರೂ ಒಟ್ಟಾಗಿ ನಿಯೋಗವು ಹೋಗಿ ಮನವಿ ಮಾಡಿದ್ದರೂ ಇಲ್ಲಿಯವರೆಗೂ ನಮ್ಮ ಸಮುದಾಯಕ್ಕೆ ದಕ್ಕಬೇಕಾದ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಸ್ಥಾನಮಾನಗಳು

ಯಾವುದೇ ಪಕ್ಷವಿರಲಿ ನಾವು ಒಟ್ಟಾಗಿ ಹೋಗಬೇಕು ಅಂದು ಕೇಂದ್ರ ದಲ್ಲಿ ನಮ್ಮ
ಯುಪಿಎ ಸರ್ಕಾರ ವಿದ್ದಾಗ ಉಷಾ ಮೆಹರಾ ಆಯೋಗ ರಚಿಸಿ ಆಂದ್ರಪ್ರದೇಶದಲ್ಲಿ ವರ್ಗೀಕರಣ ಮಾಡಲು ರಚಿಸಿದಾಗ ಅದು ಮಾಲ,ಮಾದಿಗ ಆದಿ ಆಂದ್ರ ಎಷ್ಟು ಜನಸಂಖ್ಯೆ ಇದೆ ಎಂದು ಮಾಹಿತಿ ಸಂಗ್ರಹಿಸಿತು

ಅದರ ಆದಾರದ ಮೇಲೆ
ದಕ್ಷಿಣ ಭಾರತದ ಎಲ್ಲಾ ರಾಜ್ಯ ಗಳಲ್ಲಿಯೂ ಜಾರಿಗೊಳಿಸಲು ನಾವು ನಿರ್ದಾರ ಮಾಡಿದ್ದು ಈ ವರ್ಗೀಕರಣ ಮಾಡಲು ಸಾಧ್ಯವಾಗಲಿಲ್ಲ ಈ ಸಮುದಾಯಕ್ಕೆ ಸರಿಯಾದ ನ್ಯಾಯ ಸಿಗಲೇ ಬೇಕೆಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸಲು ಒಂದು ಐತಹಾಸಿಕ ಮಹತ್ವದ ತೀರ್ಪು ‌ನೀಡಿದ್ದು ಈ ಸಮುದಾಯಕ್ಕೆ ನ್ಯಾಯ ಸಿಗುವಂತಾಗಿದೆ.

ಈ ತೀರ್ಪು ಬಂದ ಕೂಡಲೇ ನಾನು ಅಬಕಾರಿ ಸಚಿವ ತಿಮ್ಮಾಪೂರ ರವರು ಮುಖ್ಯಮಂತ್ರಿ ಗಳನ್ನು ಬೇಟಿ ಮಾಡಿ ಚರ್ಚೆ ಮಾಡಿ ಅನುಷ್ಠಾನಕ್ಕೆ ಒತ್ತಾಯಿಸಿದಾಗ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅನುಷ್ಠಾನ ಮಾಡುತ್ತೇವೆ ಎಂದರು

ಕೆಪಿಸಿಸಿ.ಅದ್ಯಕ್ಷರೂ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರು ಸಹ ಈ ತೀರ್ಪುನ್ನು ಸ್ವಾಗತಿಸಿ ತಡ ಮಾಡದೆ ಅನುಷ್ಠಾನ ಮಾಡಬೇಕು ಎಂದು ವಿಶ್ವಾಸ ವ್ಯಕ್ತಿ ಪಡಿಸಿದರು.

ಈ ಸಮಾಜದ ಸಮಾನತೆಯನ್ನು ಕಾಣಲು ಬುದ್ದ ಬಸವ ಅಂಬೇಡ್ಕರ್ ರವರ ಚಿಂತನೆಗಳನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಬದ್ದವಾಗಿದೆ.

ನಮ್ಮ ಸರ್ಕಾರ ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದ್ದು ಅದು ನಿಖರವಾದ ದತ್ತಾಂಶ ಗಳನ್ನು 40 ದಿನಗಳಲ್ಲಿ ಸಂಗ್ರಹಿಸಿ ಜನಸಂಖ್ಯೆಯ ಆಧಾರದಮೇಲೆ ಮೀಸಲಾತಿ ಕಲ್ಪಿಸಲು ಸಿದ್ದತೆ ನಡೆಸುತ್ತೇನೆ ಎಂಬ ಮಾತನ್ನು ಕೊಟ್ಟಿದ್ದಾರೆ.

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಈ ಸಮುದಾಯದ ಜನಸಂಖ್ಯೆಯ ಅನುಗುಣವಾಗಿ ಮತ್ತು ಆರ್ಥಿಕ ಸ್ಥಿತಿಗಳುನ್ನು ಅವಲೋಕನ ಮಾಡಿ ನಿರ್ದಿಷ್ಟ ವಾದ ಮಾಹಿತಿಗಳೊಂದಿಗೆ ನಮಗೆ ನ್ಯಾಯ ಒದಗಿಸಲಿದ್ದಾರೆ ಎಂದರು.

ನಾವು ನಮ್ಮ ಸೋದರ ಸಮುದಾಯಗಳ ಸಚಿವರಿಗೆ ಧನ್ಯವಾದಗಳನ್ನು ತಿಳಿಸಬೇಕು ಎಲ್ಲಾ ಸಚಿವರು ಈ ಒಳಮೀಸಲಾತಿ ಅನುಷ್ಠಾನಕ್ಕೆ ಬೆಂಬಲವಾಗಿದ್ದಾರೆ.

ಈಗಾಗಲೇ ತೆಲಂಗಾಣ ರಾಜ್ಯ ಒಳ ಮೀಸಲಾತಿ ಅನುಷ್ಠಾನ ಮಾಡಿದ್ದು ಆಂದ್ರಪ್ರದೇಶ,ಹರಿಯಾಣ ರಾಜ್ಯಗಳು ಅನುಷ್ಠಾನಕ್ಕೆ ಮುಂದಾಗಿದ್ದಾರೆ ನಮ್ಮ ರಾಜ್ಯದಲ್ಲಿಯೂ ಮುಂದಿನ 40 ದಿನಗಳಲ್ಲಿ ಸೂಕ್ತ ಅಂಕಿ ಆಂಶಗಳ ಸಂಗ್ರಹಿಸಿ ಅನುಷ್ಠಾನ ಮಾಡಲಿದ್ದಾರೆ ತಮಗೆ ಯಾವುದೇ ಸಂಶಯಬೇಡ ಎಂದರು

ಕರ್ನಾಟಕದ ಎಲ್ಲಾ ಹೋರಾಟದ ಸಂಘ ಸಂಸ್ಥೆಗಳು ಸಮಾಜದ ಸುಧಾರಣೆಗಾಗಿ ಹೋರಾಟ ಮಾಡಿದ್ದು ಈ ಸಂಘ ಸಂಸ್ಥೆಗಳಿಗೆ ಈ ಸಮಯದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ.

ನಮ್ಮ ಸೋದರ ಸಮುದಾಯದ ಸಚಿವರಾದ ಡಾ.ಪರಮೇಶ್ವರ್,ಮಹದೇವಪ್ಪ,ಪ್ರಿಯಾಂಕ್ ಖರ್ಗೆ,ಶಿವರಾಜ್ ತಂಗಡಗಿ, ಎಲ್ಲಾ ಸಚಿವರು ಒಂದಾಗಿದ್ದು ನಾವು ಶೀಘ್ರವಾಗಿ ಅನುಷ್ಠಾನ ಮಾಡುತ್ತೇವೆ.

ಅಂಬೇಡ್ಕರ್ ರವರ ಆಶಯದಂತೆ ನಾವು ಹೋರಾಟ ಮಾಡಲೇಬೇಕು ಅದು ಶಾಂತಿಯಿಂದಿರಬೇಕು ಯಾವುದೇ ಗಲಬೆ ಉಂಟುಮಾಡದಂತೆ ಸಂಘ ಸಂಸ್ಥೆಗಳು ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ
ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ ಸಂಸದರಾದ ಗೋವಿಂದ ಕಾರಜೋಳ,ಮಾಜಿ ಕೇಂದ್ರ ಸಚಿವ
ಎ.ನಾರಾಯಣ ಸ್ವಾಮಿ
ಮಾಜಿ ಸಂಸದರಾದ ಚಂದ್ರಪ್ಪ
ರಮೇಶ್ ಜಿಗಣಿಗಿ
ಬಗುಜನ ಸಮಾಜದ ರಾಜ್ಯಾದ್ಯಕ್ಷ ಮಾರಾಸಂದ್ರ ಮುನಿಯಪ್ಪ
ಮಾಜಿ ಶಾಸಕರಾದ ತಿಮ್ಮಮರಾಯಪ್ಪ
ಬಸವರಾಜ್ ಧಡೆಸುಗೂರು ,
ಸುಜಾತ ದೊಡ್ಡಮನಿ ಹಾಗೂ ಸಮುದಾಯದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *