ಜನರೊಂದಿಗೆ ಜನಸೇವಕ 9ನೇ ವಾರದ ಜನಸ್ಪಂದನಾಕಾರ್ಯಕ್ರಮ

ಬಾಲಕನ ಕಣ್ಣಿನ ದೋಷಕ್ಕೆ ಸಹಾಯ4ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಉಚಿತ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ನೆರವಾದ ವಲರ್ ಮಣಿರವರಿಂದ ಶಾಸಕರಿಗೆ ಧನ್ಯವಾದ ತಿಳಿಸಿದರು.
ರಾಜಾಜಿನಗರ ಶಾಸಕರ ಜನಸಂಪರ್ಕ ಕಛೇರಿಯಲ್ಲಿ ಶಾಸಕರರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನರೊಂದಿಗೆ ಜನಸೇವಕ 9ನೇ ವಾರದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸಿದರು.
ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಎಮ್.ಮುನಿರಾಜು, ಹೆಚ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ದೀಪಾ ನಾಗೇಶ್, ಪ್ರತಿಮಾ ರವರು ಉಪಸ್ಥಿತರಿದ್ದರು.
ಕುಡಿಯುವ ನೀರು ಸರಬರಾಜು, ಬೀದಿ ದೀಪ, ಪಿ.ಜಿ.ಹಾಸ್ಟಲ್ ಸಮಸ್ಯೆ, ಕಸ ವಿಲೇವಾರಿ ಹಾಗೂ ಪುಟ್ ಪಾತ್ ಒತ್ತುವರಿ ಹಲವಾರು ಸಮಸ್ಯೆಗಳು ನಾಗರಿಕರಿಂದ ಅಹವಾಲು ನೀಡಿದರು.
ಇದೇ ಸಂದರ್ಭದಲ್ಲಿ *ಶಾಸಕರಾದ ಎಸ್.ಸುರೇಶ್ ಕುಮಾರ್* ರವರು ಮಾತನಾಡಿ ಪ್ರತಿ ಸೋಮವಾರ ನಾಗರಿಕರರೊಂದಿಗೆ ಜನಸ್ಪಂದನಾ ಕಾರ್ಯಕ್ರಮದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿದೆ.
ಮನೆಯಿಂದ ಬರಲು ಸಾಧ್ಯವಾಗದಿದ್ದರೆ ಪೋನ್ ಕರೆ ಮಾಡಿ ಸಮಸ್ಯೆ ಹೇಳಬಹುದು.
ಬಿಜೆಪಿ 18ಶಾಸಕರು ಅಮಾನತು ಮಾಡಿರುವುದರಿಂದ ಅರ್ಜಿ ಸಮಿತಿಯಲ್ಲಿ ಶಾಸಕರು ಭಾಗವಹಿಸಲು ಆಗುವುದಿಲ್ಲ ಇದರಿಂದ ಸಮಸ್ಯೆಗಳು ಪರಿಹರಿಸಲು ಆಗುವುದಿಲ್ಲ. ವಿಧಾನಸಭೆಯ ಸಭಾಪತಿಗಳು ಪುನರ್ ಪರಿಶೀಲನೆ ಮಾಡಿ ಅಮಾನತು ಆದೇಶ ಹಿಂಪಡೆಯಬೇಕು, ಪ್ರಜಾಪ್ರಭುತ್ವ ಮೌಲ್ಯಗಳು ಎತ್ತಿಹಿಡಿಯಬೇಕು.
ಶಾಲೆಯ ರಜಾದಿನದಲ್ಲಿ ಬೀದಿಯಲ್ಲಿ ಊದಿನ ಕಡ್ಡಿ ಮಾರುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿಯ ಜೊತೆಯಲ್ಲಿ ಮಾತನಾಡಿದೆ. ಅವನ ಶಿಕ್ಷಣಕ್ಕೆ ಬೇಕಾದ ಸಹಾಯ ಮತ್ತು ಬಾಲಕನ ದೃಷ್ಟಿ ದೋಷವಿರುವುದರಿಂದ ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು, ನಾಳೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.
ಬೇಸಿಗೆ ಕಾಲ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ನಾಗರಿಕರು ನೀರು ಅಮೂಲ್ಯ ಮಿತವಾಗಿ ಬಳಸಿ ಎಂದು ಹೇಳಿದರು.
ಕಿಡ್ನಿ ಸಮಸ್ಯೆಯಿಂದ 4ವರ್ಷಗಳಿಂದ ಡಯಾಲಿಸಿಸ್ ಚಿಕಿತ್ಸೆಯನ್ನು ಪಡೆಯುತ್ತಿದ್ದ ವಲರ್ ಮಣಿರವರು, ಡಯಾಲಿಸಿಸ್ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲು ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಸಹಕಾರ ನೀಡಿದ ಕಾರಣದಿಂದ ಧನ್ಯವಾದವನ್ನು ತಿಳಿಸಿದರು
ವಲರ್ ಮಣಿರವರು ಇಂದು ಒಂದು ಕಿಡ್ನಿಯನ್ನು ಆಳವಡಿಸಲಾಗಿದೆ ಆರೋಗ್ಯವಂತರಾಗಿ ಇದ್ದಾರೆ
ಮಂಡಲ ಬಿಜೆಪಿ ಅಧ್ಯಕ್ಷರಾದ ಸುದರ್ಶನ್, ಬಿಜೆಪಿ ಮುಖಂಡರುಗಳಾದ ಕಾಮಧೇನು ಸುರೇಶ್,ಕೇಶವಮೂರ್ತಿ, ವಿಶ್ವನಾಥ್, ಟಿ.ಎನ್.ರಮೇಶ್, ಸತೀಶ್ ಭಗವಾನ್, ಯಶಸ್ ನಾಯಕ್, ಅಮಿತ್ ಜೈನ್, ಕಿರಣ್ ಕೃಷ್ಣಮೂರ್ತಿ, ವೆಂಕಟೇಶ್ ಬಾಬು, ಮಂಜುನಾಥ್, ಪುಟ್ಟರವರು , ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.