ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶೀಘ್ರದಲ್ಲಿ ನೀರನ್ನು ಹರಿಸಬೇಕು ಸಚಿವ: ಮುನಿಯಪ್ಪ.

ಈ ಯೋಜನೆಯ ಮೂಲಕ ಕುಡಿಯುವ ನೀರು ನಮ್ಮ ಭಾಗಕ್ಕೆ ಶತಾಯಗತಾಯ ಹರಿಸುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದೇನೆ ಸಚಿವ:ಕೆಹೆಚ್. ಮುನಿಯಪ್ಪ

ಸಕಲೇಶಪುರ.6(ಹೆಬ್ಬನಹಳ್ಳಿ)

ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ *ಕೆಹೆಚ್. ಮುನಿಯಪ್ಪನವರು* ಇಂದು ಎತ್ತಿನಹೊಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇವತ್ತಿನ ಕಾರ್ಯಕ್ರಮ ಪಶ್ಚಿಮ ದಿಂದ ಪೂರ್ವಕ್ಕೆ ನೀರನ್ನು ಹರಿಸುವ ಒಂದು ಮಹತ್ತರ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರು ಚಾಲನೆ ನೀಡಿರುವುದು ಒಂದು ಸಂತಸಕರ ವಿಷವಾಗಿದೆ.

ಅದರಲ್ಲಿ ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರು ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿ 14 ತಿಂಗಳಲ್ಲಿ ಬಯಲು ಸೀಮೆಯ ಭಾಗದ ಜಿಲ್ಲೆಗಳಾದ ಬೆಂಗಳೂರು ನಗರದ, ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ ನೀರನ್ನು ಹರಿಸಲು ಮುಂದಾಗುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ ಎಂದರು.

ಸಚಿವರಾದ ಎಂಸಿ ಸುಧಾಕರ್,ಕೃಷ್ಣ ಬೈರೇಗೌಡ, ನಾನೂ ಈ ಯೋಜನೆಯನ್ನು ನಮ್ಮ ಬಯಲು ಸೀಮೆಯ ಜಿಲ್ಲೆಗಳಿಗೆ ಮಾನ್ಯ ವೀರಪ್ಪ ಮೊಯಲಿ ರವರ ನೇತೃತ್ವದಲ್ಲಿ ಹೋರಾಟ ಮಾಡಿದ್ದೀವಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ನಮ್ಮ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕಲ್ಪಿಸಬೇಕು ಎಂದು ಅವರಲ್ಲಿ ಒತ್ತಾಯ ಮಾಡುತ್ತೇನೆ

ನಮ್ಮ ಬಯಲು ಸೀಮೆ ಭಾಗದ ಜನರಿಗೆ ಬೋರ್ವೆಲ್ ಮೂಲಕ 1000 ಅಡಿ ಕೊರಿಸಿದರೂ ನಮಗೆ ನೀರು ಸಿಗಲ್ಲಾ ಸಿಕ್ಕಿದರೂ ಅದು ಫ್ಲೋರೈಡ್ ನಿಂದ ಕೂಡಿದ್ದು ಅದು ಕುಡಿಯಲು ಯೋಗ್ಯವಾಗಿರುವುದಲ್ಲ ಆದ ಕಾರಣ ತಾವು ಈ ಯೋಜನೆಯ ಮೂಲಕ ನಮ್ಮ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸುವ ಕಾರ್ಯ ಶೀಘ್ರದಲ್ಲಿ ಮುಂದುವರಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯಲಿ, ಸಚಿವರಾದ ಪರಮೇಶ್ವರ್ ,ಬೈರತಿ ಸುರೇಶ್, ರಾಜಣ್ಣ, ಎಂಬಿ ಪಾಟೀಲ್, ಹಾಗೂ ಶಾಸಕರು ,ಅಧಿಕಾರಿಗಳು ಉಪಸ್ಥಿತರಿದ್ದರು.
ಎತ್ತಿನಹೊಳೆ ಯೋಜನೆಯ ನೀರೆತ್ತುವ ಘಟಕ ವಿಆರ್ 8 ಘಟಕದ ಉದ್ಘಾಟನೆ ಮಾಡಿದ ಆಹಾರ ಸಚಿವ ಮುನಿಯಪ್ಪ.ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶೀಘ್ರದಲ್ಲಿ ನೀರನ್ನು ಹರಿಸಬೇಕು ಸಚಿವ: ಮುನಿಯಪ್ಪ.

ಈ ಘಟಕದಿಂದ ಸುಮಾರು 24 ಟಿಎಂಸಿ ನೀರು ಸರಬರಾಜು ಘಟಕ

ಬಯಲು ಪ್ರದೇಶಗಳಾದ ಕೋಲಾರ,ಚಿಕ್ಕಬಳ್ಳಾಪುರಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಪ್ರಮುಖ ಯೋಜನೆ

ಸಕಲೇಶಪುರ. 6

ಅಳುವಳ್ಳಿ ಯಲ್ಲಿಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪನವರು ಎತ್ತಿನ‌ಹೊಳೆ ಯೋಜನೆಯ ನೀರನ್ನು ಲಿಪ್ಟ್ ಮಾಡುವ ಪಂಪ್ ಹೌಸ್ ನ ವಿ ಆರ್ 8 ಘಟಕದ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.

ಎತ್ತಿನಹೊಳೆ ಹೋರಾಟದ ಫಲ ಇಂದು ಒಂದು ಹಂತಕ್ಕೆ ಬಂದಿರುವುದು ಸಂತಸವಾಗಿದೆ
ವೀರಪ್ಪ ಮೋಯಲಿ ನಾನು ಸಂಸದರಾಗಿದ್ದಾಗ 10 ವರ್ಷಗಳ ಸುದೀರ್ಘವಾದ ಹೋರಾಟದ ಫಲ ಇಂದು ಸಾದ್ಯವಾಗಿದೆ

ಪರಮಶಿವಯ್ಯ ರವರು ಸುಮಾರು 500 TMC ನೀರನ್ನು ಬಯಲು ಸೀಮೆಗೆ ಕೊಡಿಸಲು ಹೋರಾಟ ಮಾಡಿದ್ದರು
ಅಂದಿನ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ರವರು ನೇತೃತ್ವದಲ್ಲಿ ನಡದ ಈ ಯೋಜನೆ ಬಹಳ ಮುಖ್ಯವಾಗಿ ಬಯಲು ಸೀಮೆ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅನುಕೂಲ ವಾಗಿದೆ ಇದು ಹಂತ ಹಂತವಾಗಿ ನೀರನ್ನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ರವರಿಗೆ , ಎಲ್ಲಾ ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *

You may have missed