ಆಹಾರ ಸಚಿವರಿಂದ ವಿಧಾನ ಸೌಧ ಪ್ರಗತಿ ಪರಿಶೀಲನೆ ಸಭೆ Video conference ಮೂಲಕ
ವಿಧಾನ ಸೌಧಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರ ನೇತೃತ್ವದಲ್ಲಿ ಜಂಟಿ/ಉಪ ನಿರ್ದೇಶಕರುಗಳು, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಎಲ್ಲಾ ಜಿಲ್ಲಾ ವ್ಯವಸ್ಥಾಪಕರುಗಳೊಂದಿಗೆ ಇಂದಪ್ರಗತಿ ಪರಿಶೀಲನಾ ಸಭೆಯನ್ನು (Video Conference ಮೂಲಕ) ನಡೆಸಿದರು.
ಇಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆ
ಜಿಲ್ಲೆಯಲ್ಲಿ ಆಹಾರ ಇಲಾಖೆಯ ಪ್ರಗತಿ ಬಗ್ಗೆ ಇಂದು ಎಲ್ಲಾ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು
ಆಹಾರ ಇಲಾಖೆಯಲ್ಲಿನ ಡಿಬಿಟಿ ಹಾಗೂ ಸರ್ವರ್ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಹಾರ ಇಲಾಖೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ನೀಡುವ ಪಡಿತರವನ್ನು ನೇರವಾಗಿ ನಾಗರಿಕರಿಗೆ ತಲುಪಿಸಲು ಸೂಕ್ತ ಕ್ರಮ ತೆಗೆದುಕೊಂಡು ಕೆಲಸ ಮಾಡಿದಾಗ ಮಾತ್ರ ಇಲಾಖೆಗೆ ಒಳ್ಳೆಯ ಹೆಸರನ್ನು ಪಡೆಯಲು ಸಾಧ್ಯ
ಇಲಾಖೆಯಲ್ಲಿ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಇಂದಿನಿಂದ ಇಲಾಖೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಬೇಕು ಎಂದರು.
ನಾವು ನೀಡುವ ಪಡಿತರವು ಶುಧ್ಧ ವಾಗಿರಬೇಕು ,ಅಕ್ಕಿ ರಾಗಿ ಗುಣಮಟ್ಟದಿಂದ ಕೂಡಿರಬೇಕು ಅಧಿಕಾರಿಗಳು ನೇರವಾಗಿ ಬೇಟಿ ಮಾಡಿ ರಾಗಿಯ ಗುಣಮಟ್ಟವನ್ನು ನೋಡಬೇಕು
ಇಲಾಖೆಯಲ್ಲಿ ಯಾವುದೇ ಲೋಪ ದೇಶಗಳು ಕಂಡುಬಂದಲ್ಲಿ ನೇರವಾಗಿ ಅಧಿಕಾರಿಗಳು ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ತೂಕಗಳಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಜಿಸಿ.ಪ್ರಕಾಶ್,ಆಯುಕ್ತರಾದ ವಿವಿ.ಜೋತ್ನಾ , ವ್ಯವಸ್ಥಾಪಕ ನಿರ್ದೇಶಕರಾದ ಚಂದ್ರಕಾಂತ್,ಕಾನೂನು ಮಾಪನ ಇಲಾಖೆಯ ನಿಯಂತ್ರಕರಾದ ಅನಿತಾ ಲಕ್ಷ್ಮೀ, ಆಹಾರ ಆಯೋಗದ ಕಾರ್ಯದರ್ಶಿ ಸುಜಾತ ಹೊಸಮನಿ,ರಾಜ್ಯ ಪಡಿತರ ವಿತರಣಾ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.