ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ. ಶಿವಶಂಕರ ಎನ್.
ಬೆಂಗಳೂರು ಗ್ರಾಮಾಂತರ ಜಿಲ್ಲೆ,ಜಿಲ್ಲಾ ಜನತಾ ದರ್ಶನ ಸೇರಿದಂತೆ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಸ್ವೀಕೃತಿಯಾಗಿರುವ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಿ ಕಾಲ ಮಿತಿಯೊಳಗೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಡಾ.ಎನ್. ಶಿವ
ಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ
ದ ಜಿಲ್ಲಾಧಿಕಾರಿಯವರ ಜಿಲ್ಲಾ ಕಛೇರಿಸಭಾಂಗ
ಣದಲ್ಲಿ ಇಂದು ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ
ದರು.
ಸಕಾಲದಲ್ಲಿ ಬಾಕಿಇರುವ ಅರ್ಜಿಗಳನ್ನು ಅವಧಿ
ಮೀರದಂತೆ ತ್ವರಿತವಾಗಿ ಬಗೆಹರಿಸಲು ಕ್ರಮವ
ಹಿಸಿ, ಕಾಲಮಿತಿಯೊಳಗೆ ಬಗೆಹರಿಸದೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳೇನೇರ ಹೊಣೆಯಾ
ಗುತ್ತಾರೆ ಎಂದು ತಿಳಿಸಿದರು
ಸರ್ಕಾರಿ ಸ್ಮಶಾನ ಜಾಗ ಒತ್ತುವರಿ ಸಮಸ್ಯೆ, ಸಂಪರ್ಕ ರಸ್ತೆ ಸಮಸ್ಯೆಗಳ ಬಗ್ಗೆ ದೂರುಗಳು ಬಂದಲ್ಲಿ ಆದ್ಯತೆ ಮೇರೆಗೆ ಶೀಘ್ರವಾಗಿ ಬಗೆಹರಿ
ಸಲು ತಾಲ್ಲೂಕು ತಹಸೀಲ್ದಾರ್ ಗಳಿಗೆ ಸೂಚನೆ ನೀಡಿದರು.
ಆಶ್ರಯ ಯೋಜನೆಗೆ ಗುರುತಿಸಿರುವ ಸ್ಥಳಗಳ
ನ್ನು ಶೀಘ್ರವಾಗಿ ಸರ್ವೆ ಮಾಡಿಸಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲೆಯ ತಾಲ್ಲೂಕು ಕಾರ್ಯನಿರ್ವಾ
ಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಂಬಂ
ಧಿಸಿದಂತೆ ವಿಲೇವಾರಿ ಘಟಕಗಳ ಜಮೀನು ಮಂಜೂರಾತಿಗೆ ಕ್ರಮವಹಿಸಲು ಅಧಿಕಾರಿಗ
ಳಿಗೆ ಸೂಚನೆ ನೀಡಿದರು.
ತಾಲ್ಲೂಕುವಾರು ಮತ್ತು ಇಲಾಖಾವಾರು ಕೆರೆ
ಗಳ ಮಾಹಿತಿ ಪಡೆದು ಕೆರೆ ಒತ್ತುವರಿ ತೆರವು
ಗೊಳಿಸಲು ಶೀಘ್ರ ಕ್ರಮ ವಹಿಸುವಂತೆ ಅಧಿಕಾ
ರಿಗಳಿಗೆ ಸೂಚಿಸಿದರು.
ಯುವ ಮತದಾರರ ನೋಂದಣಿಗೆ ಕ್ರಮ
ಚುನಾವಣಾ ಹಿನ್ನೆಲೆಯಲ್ಲಿ ಯುವ ಮತದಾರ
ರ ನೋಂದಣಿ ಹೆಚ್ಚಳಕ್ಕೆ ಮತ್ತು ಪದವೀಧರರ ನೋಂದಣಿಗೆ ಕ್ರಮ ವಹಿಸಿ ಸ್ವೀಪ್ ಸಮಿತಿಯ ಮೂಲಕ ಜಾಗೃತಿ ಮೂಡಿಸಲು ಇದೇಸಂದರ್ಭ
ದಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾ
ರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಪಂಚಾಯತಿ ಮುಖ್ಯಕಾರ್ಯ
ನಿರ್ವಾಹಕಾಧಿಕಾರಿ ಡಾ.ಅನುರಾಧ ಕೆ.ಎನ್ , ಅಪರ ಜಿಲ್ಲಾಧಿಕಾರಿ ಹೆಚ್ .ಅಮರೇಶ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಉಪವಿ
ಭಾಗಾಧಿಕಾರಿ ಶ್ರೀನಿವಾಸ್, ದೊಡ್ಡಬಳ್ಳಾಪುರ ತಾಲ್ಲೂಕು ತಹಸೀಲ್ದಾರ್ ವಿದ್ಯಾ ವಿಭಾರಾಥೋ
ಡ್, ದೇವನಹಳ್ಳಿ ತಾಲ್ಲೂಕು ತಹಸೀಲ್ದಾರ್ ಶಿವರಾಜ್, ನೆಲಮಂಗಲ ತಾಲ್ಲೂಕು ತಹಸೀ
ಲ್ದಾರ್ ಅರುಂಧತಿ, ಹೊಸಕೋಟೆ ತಾಲ್ಲೂಕು ತಹಸೀಲ್ದಾರ್ ವಿಜಯ ಕುಮಾರ್, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂ
ದಿ ವರ್ಗದವರು ಉಪಸ್ಥಿತರಿದ್ದರು.