ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಮಂಡಿಬೆಲೆ ಗ್ರಾಮ ಪಂಚಾಯಿತಿ  ಪ್ರಭಾರ ಅಧ್ಯಕ್ಷರಾಗಿ ಆರ್.ಕೇಶವ

ಮಂಡಿಬೆಲೆ ಗ್ರಾಮ ಪಂಚಾಯಿತಿ  ಪ್ರಭಾರ ಅಧ್ಯಕ್ಷರಾಗಿ ಆರ್.ಕೇಶವ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ಮಂಡಿ
ಬೆಲೆ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷ
ರಾಗಿ ಕೇಶವರವರು ಅಧಿಕಾರವಹಿಸಿಕೊಂಡರು

ಸೋಮವಾರದಂದು ನಡೆದ ಕಾರ್ಯಕ್ರಮದ
ಲ್ಲಿ ಅಂಬಿಕಾರವರು ಕಾರ್ಯನಿಮಿತ್ತ ಒಂದು ತಿಂಗಳಿಗೂ ಹೆಚ್ಚು ಕಾಲ ಗೈರು ಹಾಜರಾಗುತ್ತಿ
ರುವುದರಿಂದ ಪಂಚಾಯಿತಿಯ ಕೆಲಸ ಕಾರ್ಯ
ಕ್ರಮಗಳು  ಸುಗಮವಾಗಿ ನಡೆಸಿ ಕೊಂಡು ಹೋಗುವ ಉದ್ದೇಶದಿಂದ ಉಪಾಧ್ಯಕ್ಷರಾಗಿದ್ದ ಕೇಶವರವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ
ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಶವರವ
ರು ಮಾತನಾಡಿ,ನನಗೆ ಸಿಕ್ಕಿರುವ ಅವಧಿಯಲ್ಲಿ 1 ನೇ ಮಹಡಿ ಕಟ್ಟಡ ನಿರ್ಮಾಣ, ಗ್ರಾಮಗಳ
ಲ್ಲಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಈ ಖಾತೆಗಳನ್ನು ಮಾಡಿಕೊಡುವ ಕಡೆಗೆ ಗಮನ ಹರಿಸಲಾಗುವುದೆಂದರು.

ಇದೆ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗ
ಳಾದ ಗಡ್ಡದನಾಯಕನಹಳ್ಳಿಯ ಸದಸ್ಯರಾದ ನಾಗರಾಜು, ಮಂಡಿಬೆಲೆಯ ಶಿವಕುಮಾರ್, ತಿಮ್ಮಳ್ಳಿಯ ಸದಸ್ಯರಾದ ನಾರಾಯಣಸ್ವಾಮಿ, ಧರ್ಮಪುರದ ಅನಿಲ್ ಕುಮಾರ್, ಕಾಂಗ್ರೆಸ್ ನ ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯರಾದ ಕೆ.ಸಿ.ಮಂಜುನಾಥ್ ,ಮುಖಂಡರಾದ ವೆಂಕಟೇ
ಶ್, ರೈತ ಮುಖಂಡ ನಾರಾಯಣಸ್ವಾಮಿ, ರಾಮಚಂದ್ರಪ್ಪ, ಯಲಿಯೂರು ವೀರಣ್ಣ, ಎಂ.ಪಿ.ಸಿ.ಎಸ್ ಅಧ್ಯಕ್ಷ ಆನಂದ್‌, ಮಂಡಿಬೆಲೆ ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷ ದೇವರಾಜು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗೋಪಾಲ್ ರಾವ್ ,ಕಾರ್ಯದರ್ಶಿ ಸುಜಾತ,    ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

You may have missed