25ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ನಗರ್ತ ಯುವಕ ಸಂಘವು 1999ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು*25 ವರ್ಷದಿಂದ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಪ್ರತಿವರ್ಷದಂತೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 5ನೇ ತರಗತಿಯಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಾ ಬರುತ್ತಿದ್ದೇವೆ.ನಮ್ಮ ಕಾರ್ಯ ಚಟುವಟಿಕೆಗಳನ್ನು ಅವಲೋಕಿಸಿ ಸುಮಾರು 70 ಮಂದಿ ಜನಾಂಗದ ದಾನಿಗಳು ಹಾಗೂ ಪಟ್ಟಣದ ಕೀರ್ತಿಶೇಷ ಪಿ.ಆರ್. ನಾಗರಾಜಪ್ಪ ರವರ ಸ್ಮರರ್ಣಾರ್ಥವಾಗಿ ಕೌಸಲ್ಯ ನಾಗರಾಜ್ ಆರೋಗ್ಯನಿಧಿಗೆ 1 ಲಕ್ಷಗಳು ವಿದ್ಯಾರ್ಥಿ ವೇತನಕ್ಕೆ ಒಂದು ಲಕ್ಷ ನೀಡಿರುತ್ತಾರೆ. ಬೆಂಗಳೂರಿನ ನಿವಾಸಿ ಕೀರ್ತಿಶೇಶ ವಿ.ಪುಟ್ಟರಾಜ್ ರವರ ಸ್ಮರಣಾರ್ಥವಾಗಿ ಶ್ರೀಮತಿ ಜಗದಾಂಭ ಆರೋಗ್ಯ ನಿಧಿಗೆ 50,000 ವಿದ್ಯಾರ್ಥಿ ವೇತನಕ್ಕೆ 50,000 ನೀಡಿರುತ್ತಾರೆ. ವಿದ್ಯಾರ್ಥಿ ವೇತನವನ್ನು ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ತಿಳಿಯಪಡಿಸುತ್ತಾಮುಂದಿನ ದಿನಗಳಲ್ಲಿ ನೀವು ಸಹ ಪುಧುವಟ್ಟು ನೀಡಿ ಸಹಾಯ ಮಾಡಬೇಕೆಂದು ಗೌರವಾಧ್ಯಕ್ಷರಾದ ಪಿ ಮುರಳಿಧರ್ ಕರೆ ನೀಡಿದರು*.
*ವಿಜಯಪುರ ಪಟ್ಟಣದ ಶ್ರೀ ನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ನಗರ್ತ ಯುವಕ ಸಂಘದ ಆಶ್ರಯದಲ್ಲಿ 25ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಸೇವಕರಾದ ವಿ ಮಂಜುನಾಥ್ ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಶಾಲೆಯಲ್ಲಿ ಬೋಧನೆಯನ್ನು ಗಮನವಿಟ್ಟು ಆಲಿಸಬೇಕು. ಇಂದಿನ ಗಣಿಕೀಕೃತ ಯುಗ ಮತ್ತು ಮೊಬೈಲ್ ಸಾಧನದಲ್ಲಿ ನೆಟ್ ಮೂಲಕ ಪಠ್ಯಪುಸ್ತಕ ವಿಷಯವನ್ನು ನೋಡಿಅರ್ಥಮಾಡಿಕೊಳ್ಳಬಹುದು.
ಆದರೆ ನಿಮಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ನೋಡಿ. ಮೊಬೈಲ್ಗೆ ಆಡಿಟ್ ಆಗಬೇಡಿ. ಪಿಯುಸಿಯಲ್ಲಿ ಕಡಿಮೆ ಅಂಕಗಳು ಬಂದಿದೆ ಅಂತಕ ಪಡದೆ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಐಟಿಐ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಿರಿ ಎಂದು ತಿಳಿಯಪಡಿಸುತ್ತಾಡಿಪ್ಲೋಮಾ ವ್ಯಾಸಂಗ ಮಾಡಿದರೆ ಇಂಜಿನಿಯರ್ ಪದವಿಗೆ ಸಮ.ಆದ್ದರಿಂದ ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಂಗ ಮಾಡಿ ತಂದೆತಾಯಿಗಳನ್ನು ಗುರುಗಳನ್ನು ಪ್ರೀತಿಸಬೇಕೆಂದು ಕರೆ ನೀಡುತ್ತಾವಿದ್ಯಾರ್ಥಿಗಳು ಪ್ರತಿಭಾಪುರಸ್ಕಾರ ಪಡೆದ ಹಾಗೆ ಯೋಗಧ್ಯಾನದ ಜೊತೆಗೆನಿಮ್ಮ ಮನಸ್ಸಿನ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕೆಂದುತಿಳಿಸಿದರುಮುಖ್ಯ ಅತಿಥಿಗಳಾದ ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಗಳು ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್ ಕೃಪಾ ಶಂಕರ್ ಮಾತನಾಡುತ್ತಾ ವಿದೇಶಗಳಲ್ಲಿ ಪ್ರಾಥಮಿಕ ಹಂತದಲ್ಲಿ ತಾಂತ್ರಿಕ ಶಿಕ್ಷಣ ಬಗ್ಗೆ ತರಬೇತಿ ನೀಡುತ್ತಾರೆ ಆದರೆ ನಮ್ಮ ದೇಶದಲ್ಲಿ ಆ ತರಹ ಶಿಕ್ಷಣ ಇರುವುದಿಲ್ಲನಮ್ಮ ದೇಶದಲ್ಲಿ ಕಿರಿಯ ಹಿರಿಯ ಪ್ರೌಢ ಶಿಕ್ಷಣ ಇರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು 9ನೇ ತರಗತಿಗೆ ಪ್ರವೇಶ ಮಾಡಿದ ಸಮಯದಲ್ಲಿ ತಮ್ಮ ಮುಂದಿನ ಗುರಿಯನ್ನು ಮನದಾಟು ಮಾಡಿಕೊಂಡು ಸಾಧನೆಯನ್ನು ತೋರಬೇಕೆಂದು ಕರೆ ನೀಡಿದರುಈ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆಯನ್ನು ರೋಟರಿ ಶಾಲೆಯ ಹಿರಿಯ ಶಿಕ್ಷಕರಾದ ಕಲಾವತಿ ಬಿ ರಿತ್ತಿ ಮತ್ತು ಡೇಟಾ ಮತ್ತು ಸೈನ್ಸ್ ವಿಭಾಗದಲ್ಲಿನ ಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದಿರುವ ಶ್ರೀ ವೆಂಕಟೇಶ್ವರ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾಕ್ಟರ್ ಎಸ್ ಸಂತೋಷ್ ಕುಮಾರ್ ರವರನ್ನು ಅಭಿನಂದಿಸಿ ಗೌರವಿಸಿದ್ದರು.ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ 5ನೇ ತರಗತಿಯಿಂದ 9ನೇ ತರಗತಿ ಮಕ್ಕಳಿಗೆ ಮತ್ತು ಪದವೀಧರ ಸುಮಾರು 60ರಿಂದ 70ವಿದ್ಯಾರ್ಥಿ ಗಳಿಗೆ ವಿದ್ಯಾವೇತನ ನೀಡಿ ಗೌರವಿಸಲಾಯಿತುಈ ಕಾರ್ಯಕ್ರಮದಲ್ಲಿ ಪುದುಬಟ್ಟು ನೀಡಿರುವ ದಾನಿಗಳಾದ ಎಂ ಕೌಸಲ್ಯ ನಾಗರಾಜ್ ಶ್ರೀಮತಿ ಜಗದಾಂಭ ಪುಟ್ಟರಾಜ್ ಕುಮಾರಿ ಎಂ ಚಿನ್ಮಯ್ ಮೋಹನ್ ರವರನ್ನು ಸನ್ಮಾನಿಸಿ ಗೌರವಿಸಿದ್ದರು
ಈ ಕಾರ್ಯಕ್ರಮದಲ್ಲಿ ಕೋರಮಂಗಲ ರುದ್ರಪ್ಪ ಟ್ರಸ್ಟ್ ಮತ್ತು ಎ ವಿ ವಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತುಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎ ಮಂಜುನಾಥ್ ಮಾತನಾಡುತ್ತಾ ವಿದ್ಯಾರ್ಥಿ ವೇತನಕ್ಕೆ ಪುದುಬಟ್ಟು ನೀಡಿರುವ ಜನಾಂಗದವರಿಗೆ ಶುಭಾಶಯಗಳು ಕೋರುತ್ತಾ ಮುಂದೆ ಸಹ ಸಹಕಾರ ನೀಡಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರಾಗಿ ಎ ಮಧು ಎಸ್ ಮಂಜುನಾಥ್ ಪಿ ಮೋಹನ್ ವಿ ಸುಮಂತ್ ಕುಮಾರ್ ಎಂ ಕಾರ್ತಿಕ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರುಮುಖ್ಯ ಅತಿಥಿಗಳಾಗಿ ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷರಾದ ಸಿ ಭಾಸ್ಕರ್ ಗೌರವ ಕಾರ್ಯದರ್ಶಿಯಾದ ಅಮರ್ ಸಹ ಕಾರ್ಯದರ್ಶಿಯಾದ ಮನೋಹರ್ ಖಜಾಂಚಿ ಗಳಾದ ಈ ಸುನೀಲ್ ನಿಕಟ ಪೂರ್ವ ಅಧ್ಯಕ್ಷರಾದ ಎಂ ಶಿವಪ್ರಸಾದ್ ಎನ್ ರುದ್ರಮೂರ್ತಿ ಮಾಜಿ ಅಧ್ಯಕ್ಷರಾದ ಬಿಸಿ ಸಿದ್ದರಾಜ್ ಮಹಂತಿನ ಮಠ ಧರ್ಮ ಸಂಸ್ಥೆಯ ಅಧ್ಯಕ್ಷರಾದ ಪುನೀತ್ ಶಿವಕುಮಾರ್ ಕಾರ್ಯದರ್ಶಿಗಳಾದ ವಿ ವಿಶ್ವನಾಥ್ ಸಿ ಸುರೇಶ್ ಪಿ. ಮೋಹನ್ ಮತ್ತು ಅಂಗ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.