ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಬೆಂಗಳೂರು ಇಂಡಿಯನ್ ಆಯಿಲ್ ಕಾರ್ಪೊರೇಶನ್ ವತಿಯಿಂದ ಇಂದು ಮದರ್ ಟೇಕ್ಲಾ ಆಡಿಟೋರಿಯಂ ನಲ್ಲಿ “ಸಕ್ಷಮ್” ಸಂರಕ್ಷಣಾ ಕ್ಷಮತಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ

ಬೆಂಗಳೂರು ಇಂಡಿಯನ್ ಆಯಿಲ್ ಕಾರ್ಪೊರೇಶನ್ ವತಿಯಿಂದ ಇಂದು ಮದರ್ ಟೇಕ್ಲಾ ಆಡಿಟೋರಿಯಂ ನಲ್ಲಿ “ಸಕ್ಷಮ್” ಸಂರಕ್ಷಣಾ ಕ್ಷಮತಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ.

ಇಂಧನ ಮತ್ತು ಗ್ಯಾಸ್‌ ಎಂಬ ಮೂಲಭೂತ ನಮಗೆ ನೈಸರ್ಗಿಕವಾಗಿ ದೊರೆಯುವ ಇಂಧನ ಮೂಲಗಳಾಗಿದ್ದು ಇವುಗಳನ್ನು ನಾವು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು ಇವಗಳನ್ನು ನಾವು ಮಿತವಾಗಿ ಮತ್ತು ಸಮರ್ಪಕವಾಗಿ ಬಳಸಬೇಕಾಗುತ್ತದೆ.

ಈ ಹಿಂದೆ ನಾನು ಕೇಂದ್ರದಲ್ಲಿ ಸಚಿವನಿದ್ದಾಗ ನಾರ್ವೆ ದೇಶಕ್ಕೆ ಬೇಟಿ ನೀಡಿ ಅಲ್ಲಿ ಉತ್ಪಾದನೆ ಮಾಡುವ ಇಂಧನಗಳ ಕುರಿತು ಪರಿಶೀಲನೆ ನಡೆಸಿದ್ದೆ ಅಲ್ಲಿನ ಸರ್ಕಾರಗಳು ಬಹಳ ಗುಣಮಟ್ಟದ ಇಂಧನಗಳನ್ನು ಉತ್ಪಾದನೆ ಮಾಡುತ್ತಾರೆ ಅಲ್ಲಿ ಹೆಚ್ಚು ಉತ್ಪಾದನೆ ಇದ್ದು ನೌಕರರ ಸಮಸ್ಯಗಳು ಹೆಚ್ಚಾಗಿವೆ. ನಮ್ಮ ದೇಶದಲ್ಲಿ ಇಂಧನದ ಮೂಲಗಳ ಕೊರೆತೆಯಿದ್ದು ನಾವು ಇತರೆ ದೇಶಗಳಿಂದ ಆಮದು ಮಾಡಿಕೊಂಡಾಗ ನಾವು ಬೇರೆ ದೇಶಗಳಿಗೆ ಹೆಚ್ವಿನ ಲಾಂಭಂಶವನ್ನು ಒದಗಿಸುತ್ತೇವೆ

ನಮ್ಮ ದಿನಬಳಕೆ ಮೂಲಭೂತ ಇಂಧನ ಮೂಲಗಳಾದ ಗ್ಯಾಸ್,ಪೆಟ್ರೋಲ್ ಇಂಧನ ಮೂಲಗಳನ್ನು ನಾವು ಮಿತವಾಗಿ ಬಳಸಬೇಕು ಮತ್ತು ಅವುಗಳನ್ನು ಪೋಲು ಮಾಡಬಾರದು ಇವು ನೈಸರ್ಗಿಕವಾಗಿ ದೊರೆಯುವ ಮೂಲಗಳಾಗುದ್ದು ಇವುಗಳ ಉಳಿಕೆಗೆ ಎಲ್ಲಾ ಕುಟುಂಬದ ಗೃಹಣೀಯರು ಸಹಕರಿಸಬೇಕು.

ಈ ಸಂದರ್ಭದಲ್ಲಿ ಐಓಸಿಎಲ್ ನ ಕಾರ್ಯನಿರ್ವಾಹಕ ಹಾಗೂ ನಿರ್ದೇಶಕ ಸಿದ್ದಾರ್ಥ ಅಗರ್ವಾಲ್,ತೈಲ ಉದ್ಯೋಗದ ರಾಜ್ಯಮಟ್ಟದ ಸಂಯೋಜಕ ಸಯಂತನ್ ಸಾಮ್, ಶಾಲಿಗ್ರಾಮ್ ಮೊವಾರ್, ಎಂ. ಸಂದೀಪ್ ರೆಡ್ಡಿ , ನೀರಾ ಸಿಂಗ್ , ರಜತ್ ಬಾತ್ರಾ, ಹಾಗೂ ಸಿಬ್ಬಂದಿ ವರ್ಗದವರು ಉಪಸಿತರಿದ್ದರು.

Leave a Reply

Your email address will not be published. Required fields are marked *

You may have missed