ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

49 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ

ಇಂದು ದೇವನಹಳ್ಳಿ ಹಾಗೂ ವಿಜಯಪುರ ಪಟ್ಟಣದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಗುದ್ದಲಿಪೂಜೆ ನೇರವೇರಿಸಿದರು.ದೇವನಹಳ್ಳಿ ಟೌನ್ ನಲ್ಲಿ 25 ಕೋಟಿ, ವಿಜಯಪುರದಲ್ಲಿ 14 ಕೋಟಿ ಹಾಗೂ ತಾಲ್ಲೂಕಿನಾದ್ಯಂತ ರಸ್ತೆ ಅಭಿವೃದ್ಧಿಗೆ 04 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಾಗೂ ನವೀಕರಣಕ್ಕಾಗಿ 04 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.ನಂತರ ದೇವನಹಳ್ಳಿ ಟೌನ್ ನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಮಾತನಾಡಿಈಗಾಗಲೇ ದೇವನಹಳ್ಳಿ ಪಟ್ಟಣದ ಕೆಂಪೇಗೌಡ ಸರ್ಕಲ್ ನಿಂದ ರಾಣಿ ಸರ್ಕಲ್ ವರೆಗೆ 3.5 ಕಿ.ಮೀ ನಷ್ಟು 4 ಪಥದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 25 ಕೋಟಿ ನೀಡಿದ್ದಾರೆ. ಅದರ ಗುದ್ದಲಿಪೂಜೆ ಇಂದು ನೆರವೇರಿಸಲಾಗಿದೆ. ವಿಜಯಪುರ ಪಟ್ಟಣದಲ್ಲಿ ಕೋಲಾರ ಜಿಲ್ಲೆಗೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರುವ 5.2 ಕಿ.ಮೀ ರಸ್ತೆಗೆ 25 ಕೋಟಿ ಮಂಜೂರು ಮಾಡಲಾಗಿದ್ದು ಕಾಮಗಾರಿ ನಡೆಯುತ್ತಿದೆ.ಈ ಕಾಮಗಾರಿಗೆ ಹೆಚ್ಚುವರಿಯಾಗಿ 15 ಕೋಟಿ ಅವಶ್ಯಕತೆ ಇದ್ದು ಮಂಜೂರು ಮಾಡಲು, ದೇವನಹಳ್ಳಿ ಟೌನ್ ನಲ್ಲಿ ರಸ್ತೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 04 ಕೋಟಿ ರೂಗಳ ಅವಶ್ಯಕತೆ ಇದೆ ಹಾಗೆಯೇ ತಾಲ್ಲೂಕಿನಾದ್ಯಂತ ರಸ್ತೆಗಳ ಅಭಿವೃದ್ಧಿಗೆ 40 ಕೋಟಿ ರೂಪಾಯಿಗಳ ಅವಶ್ಯಕತೆ ಇದ್ದು, ಮಂಜೂರು ಮಾಡಲು ಲೋಕೋಪಯೋಗಿ ಸಚಿವರಲ್ಲಿ ಮನವಿ ಮಾಡಿದರು.ಇದಕ್ಕೆ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸ್ಪಂದಿಸಿ ವಿಜಯಪುರ ರಸ್ತೆಗೆ ತುರ್ತಾಗಿ ಅವಶ್ಯಕತೆ ಇರುವ ಹಣವನ್ನು ಇದೇ ಬಜೆಟ್ ನಲ್ಲಿ ನೀಡಲಾಗುವುದು, ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಅವಶ್ಯಕತೆಯಿರುವ 40 ಕೋಟಿ ಪ್ರಸ್ತಾವನೆಯಲ್ಲಿ 20 ಕೋಟಿ ಮೊದಲ ಹಂತದಲ್ಲಿ ನೀಡಲಾಗುವುದು. 2 ನೇ ಹಂತದಲ್ಲಿ 20 ಕೋಟಿ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

*ಕಾಮಗಾರಿಗಳ ಶಂಕುಸ್ಥಾಪನೆ ವಿವರ:*
ದೇವನಹಳ್ಳಿ ಪಟ್ಟಣದ ಕೆಂಪೇಗೌಡ ಸರ್ಕಲ್ ನಿಂದ ರಾಣಿ ಸರ್ಕಲ್ ವರೆಗೆ 25 ಕೋಟಿ ರೂ. ರಸ್ತೆ ಕಾಮಗಾರಿ, ವಿಜಯಪುರ ಪಟ್ಟಣದ ಶಿವನ ಸರ್ಕಲ್ ನಿಂದ ಕಾಂಕ್ರೀಟ್ ರಸ್ತೆ ಶಿಡ್ಲಘಟ್ಟ ಕ್ರಾಸ್ ವರೆಗೆ 5 ಕೋಟಿ ರೂ. (4 ಪಥ)ಕಾಂಕ್ರೀಟ್ ರಸ್ತೆ ಕಾಮಗಾರಿ, ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 207 ರಿಂದ ಕಾರಹಳ್ಳಿ ಸೇರುವ ರಸ್ತೆ ಮರು ಡಾಂಬರೀಕರಣ 157 ಲಕ್ಷ ರೂ. ಕಾಮಗಾರಿ,ದೇವನಹಳ್ಳಿ ತಾಲೂಕಿನ ನಂದಿ ಗ್ರಾಮದಿಂದ ಆಂದ್ರ ಪ್ರದೇಶ ಗಡಿಯವರೆಗೂ 9 ಕೋಟಿ ಅನುದಾನದ ಕಾಂಕ್ರೀಟ್ ರಸ್ತೆ, ದೇವನಹಳ್ಳಿ ತಾಲೂಕು ಬೆಂಗಳೂರು-ನಂದಿ 4 ಪಥದ (ರಾಜ್ಯ ಹೆದ್ದಾರಿ 104) 5 ಕೋಟಿ ರೂ. ಡಾಂಬರೀಕರಣ ರಸ್ತೆ, ದೇವನಹಳ್ಳಿ ತಾಲೂಕು ರಾಷ್ಟ್ರೀಯ ಹೆದ್ದಾರಿ-7 ಮಾಯಸಂದ್ರ ಸೇರುವ ರಸ್ತೆ 1 ಕೋಟಿ ರೂ. ಕಾಮಗಾರಿ, ದೇವನಹಳ್ಳಿ ತಾಲೂಕು ಬೆಂಗಳೂರು-ನಂದಿ ರಸ್ತೆ 4 ಕೋಟಿ ರೂ. ರಸ್ತೆ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಗಳಿಗೆ ಲೋಕೋಪಯೋಗಿ ಚಾಲನೆ ನೀಡಿದರು.ಸಭೆಯಲ್ಲಿ 5 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ಬಯಪ ಅಧ್ಯಕ್ಷರಾದ ಶಾಂತ ಕುಮಾರ್, ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಜಿ.ಪಂ ಸಿ.ಇ.ಒ ಡಾ.ಕೆ.ಎನ್ ಅನುರಾಧ, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed