ಫ.ಗು.ಹಳಕಟ್ಟಿ ಜಯಂತಿ ಮತ್ತು ಪರಮಪೂಜ್ಯ ಲಿಂಗಾನಂದ ಸ್ವಾಮೀಜಿಗಳ ಜೀವನ ಚರಿತ್ರೆ ಉಪನ್ಯಾಸ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರ –ಲಿಂಗಾನಂದ ಸ್ವಾಮೀಜಿ ಯವರು ಕಾರ್ಲ್ ಮಾರ್ಕ್ಸ್ ಅನುಯಾಗಿದ್ದರು. ಮೂಲನಾಮ ಸಂಗಮೇಶ, ಬಸವಣ್ಣನವರ ಭಾವಚಿತ್ರದಿಂದ ಜ್ಯೋತಿಯನ್ನು ಕಂಡ ಮಹಾನುಭಾವರು ಎಂಬುದಾಗಿ ರಾಷ್ಟ್ರೀಯ ಬಸವದಳದ ಶ್ರೀ ಮ ಜಯದೇವ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ಪಟ್ಟಣದ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಮತ್ತು ಅಕ್ಕನ ಬಳಗದ ಅರಿವಿನ ಮನೆಯಲ್ಲಿ ವಚನ ಪಿತಾಮಹ ಫ ಗು ಹಳಕಟ್ಟಿ ಯವರ ಹಾಗೂ ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿ ಯವರ ಜಯಂತಿ ಕುರಿತು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಲಿಂಗಾನಂದ ಸ್ವಾಮಿಗಳು ,ಸ್ವಯಂ ಕಾವಿಧಾರಿ ಯಾಗಿ ಲಿಂಗಾನಂದ ಸ್ವಾಮಿಗಳೆಂದು ಪ್ರಸಿದ್ಧಿ ಪಡೆದಿದ್ದರು. ನಮ್ಮ ಊರಿನ ನವಗ್ರಹ ದೇವಾಲಯದ ಬಳಿ1979 ರಲ್ಲಿ ಪ್ರವಚನಗಳನ್ನು ನಡೆಸಿ ಕೊಟ್ಟಿದ್ದರು.ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಯವರನ್ನು ನೇಮಿಸಿ ಬಸವಣ್ಣನವರ ಮಹಿಳಾ ಪ್ರಾತಿನಿಧ್ಯವನ್ನು ಎತ್ತಿ ಹಿಡಿದು ಮಹಿಳೆಯರಿಗೆ ಹೆಚ್ಚಿನ ಗೌರವ ಕಲ್ಪಿಸಿಕೊಟ್ಟರು ದೇವರ ಬಳಿಗೆ ಹೋಗಲು ಇಷ್ಟಲಿಂಗ ಒಂದು ಟಿಕೆಟ್ ಎಂಬುದಾಗಿ ಲಿಂಗಾನಂದ ಸ್ವಾಮೀಜಿ ತಿಳಿಸುತ್ತಿದ್ದರೆಂದು ಮ ಜಯದೇವ್ ತಿಳಿಸಿದರು.
ಬೇಕರಿ ಶಿವಣ್ಣನವರು ಮಾತನಾಡುತ್ತಾ ಪಂಚರಾತ್ರಿ ಹಳ್ಳಿಗೆ ಒಂದು ರಾತ್ರಿ ಎಂಬುದಾಗಿ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಯವರು ನಾಡಿನ ಎಲ್ಲೆಡೆಗೂ ಸಂಚರಿಸಿ ತಾಳೆಗರಿಗಳನ್ನು ಸಂಗ್ರಹಿಸಿ ವಚನಗಳನ್ನು ಸಂರಕ್ಷಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂಬುದಾಗಿ ಅಭಿಪ್ರಾಯ ಪಟ್ಟರು .
ಅರಿವಿನ ಮನೆಯ ಸಂಚಾಲಕಿಯಾದ ಶ್ರೀಮತಿ ಮೀನಾ ಸುರೇಶ್ ಬಾಬು ರವರು ಮಾತನಾಡುತ್ತಾ ವಚನ ಗುಮ್ಮಟ ಡಾ ಫ ಗು ಹಳಕಟ್ಟಿ ಹಿರಿಯ ಸಾಹಿತಿಗಳಾಗಿದ್ದ ಮಾಸ್ತಿ ಯವರೊಂದಿಗೆ ಗೌರವ ಡಾಕ್ಟರೇಟ್ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಕೋಟನ್ನು ತೆಗೆದಿರಿಸಲು ನಿರಾಕರಿಸಿದ್ದರು ಏಕೆಂದರೆ ಒಳಗೆ ತೊಟ್ಟಿದ್ದ ಅಂಗಿ ಹರಿದಿತ್ತು ಬಡತನದ ಬೇಗೆಯನ್ನು ತೋರ್ಪಡಿಸದೆ ಬಿಸಿಲಿನ ಬೇಗೆಯನ್ನು ತಾಳಿಕೊಂಡಿದ್ದರೆಂದು ತಿಳಿಸಿದರು.
ಗೋಷ್ಠಿ ಬಳಗದ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ರವರು, ವಚನಗಳನ್ನು ಹಾಡುವುದು ಹಾಗೂ ಬಾಷಣ ಮಾಡಿದರೆ ಸಾಲದು ನುಡಿದಂತೆ ನಡೆಯಬೇಕು ಹಾಗೆ ನಡೆವವರೆ ನಿಜ ಶರಣರು, ವಚನ ಪಿತಾಮಹ ಫ ಗು ಹಳಕಟ್ಟಿ ಹಾಗೂ ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿ ಯವರ ಜಯಂತಿ ಆಚರಣೆಯನ್ನು ಮಹಾಮನೆ ಮೇಲೂರು ಪುಟ್ಟಮ್ಮ ಪುಟ್ಟಣ್ಣಯ್ಯ ನವರ ಮನೆಯಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಗೋಷ್ಟಿ ಬಳಗದ ಸಂಚಾಲಕ ಮ ಸುರೇಶ್ ಬಾಬು, ಉಪಾಧ್ಯಕ್ಷೆ ಶ್ರೀಮತಿ ಅಂಬಾಭವಾನಿ, ಕೃಷ್ಣಪ್ಪ ದಾಸರು, ಶ್ರೀಮತಿಯರಾದ ವಿಮಲಾಂಬ ಅನಿಲ್ ಕುಮಾರ್, ಭಾರತಿ ಶಿವಪ್ರಸಾದ್,ರಾಧ ಮನೋಹರ್, ವಿನೋದ ಮಲ್ಲಿಕಾರ್ಜುನ, ನಿರ್ಮಲಾ ಶೇಖರ್,ಭ್ರಮರಾಂಬ, ಮಹಾದೇವಮ್ಮ, ಹಾಗೂ ಅರಿವಿನ ಮನೆ ತಾಯಂದಿರು ಉಪಸ್ಥಿತರಿದ್ದರು