ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನಲ್ಲಿ 28ನೇವರ್ಷದ ಸಂಸ್ಥಾಪನ ದಿನಾಚರಣೆ ಹಾಗು ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಸಂಸ್ಥಾಪಕರಾದ ಮುನಿರಾಜು ಪುಷ್ಪ ರವರ ಹುಟ್ಟು ಹಬ್ಬದ ಅಚರಣೆ
ಗ್ರಾಮೀಣ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸುತ್ತಿದೆ:ಮುನಿರಾಜು
ದೇವನಹಳ್ಳಿ: ಪ್ರತಿಯೊಂದು ಗ್ರಾಮದ ಬಡಜನರಿಗೂ ಹಾಗೂ ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯವನ್ನು ಒದಗಿಸುವುದು ಆಕಾಶ್ ಸಂಸ್ಥೆಯ ಉದ್ದೇಶವಗಿದೆ,ಅದರಂತೆಯೇ ವೈದ್ಯಕೀಯ ಮತ್ತು ಸಂಶೋಧನಾ ಆಸ್ಪತ್ರೆ ನಿರ್ಮಿಸಿ ಜಿಲ್ಲೆಯ ಗ್ರಾಮೀಣ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಮುನಿರಾಜು ಹೇಳಿದರು.
ದೇವನಹಳ್ಳಿ ಪಟ್ಟಣದ ಪ್ರಸನ್ನ ಹಳ್ಳಿಯಲ್ಲಿರುವ “ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ(ಎಜಿಐ) ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಹಾಗೂ ಅವರ ಹುಟ್ಟುಹಬ್ಬವನ್ನು ಆಚರಿಸಿ” ಮಾತನಾಡಿದರು.
ಇಂದು ಆಕಾಶ್ ಸಂಸ್ಥೆಯಲ್ಲಿ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿ ವರೆಗೆ ಶಿಕ್ಷಣ ಲಭಿಸುತ್ತದೆ.
ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ನಿರ್ವಹಣೆ ಮುಂತಾದ ಅಂಗಸಂಸ್ಥೆಗಳನ್ನು ನಡೆಸುತ್ತಿದೆ.
ಶೈಕ್ಷಣಿಕವಾಗಿ ಉನ್ನತ ವಿದ್ಯಾಭ್ಯಾಸವನ್ನು ವಿದ್ಯಾರ್ಥಿಗಳಿಗೆ ನೀಡಲು ಸುಸಜ್ಜಿತವಾದ ಲ್ಯಾಬ್ ವ್ಯವಸ್ಥೆ ,ಕ್ರೀಡಾಂಗಣ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದರ ಮೂಲಕ ಅವರ ಶಿಕ್ಷಣ ಜೀವನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಕಾರ್ಯತಂತ್ರವನ್ನು ಸಂಸ್ಥೆಯು ರೂಪಿಸುತ್ತದೆ ಎಂದರು.
ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಉಪಾಧ್ಯಕ್ಷ ಅಮರ್ ಗೌಡ ಮಾತನಾಡಿ ಆಕಾಶ್ ಸಂಸ್ಥೆಯು ಶಿಕ್ಷಣದೊಂದಿಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ,ಈ ಕ್ಷೇತ್ರದ ಬಡ ಜನರಿಗೆ ಸಹಕಾರಿಯಾಗುವಂತೆ ಹಲವಾರು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದೆ,
ಉಚಿತ ಆರೋಗ್ಯ ಸೌಲಭ್ಯವನ್ನು ಕಲ್ಪಿಸುತ್ತಿದೆ ಇಂತಹ ಹಲವಾರು ಒಳ್ಳೆಯ ಕಾರ್ಯಗಳು ಮುಂದೆಯೂ ಸಹ ಮುಂದುವರೆಯಲಿದೆ ಎಂದು ಹೇಳಿ ಅವರ ತಂದೆಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.
ಇದೇ ಸಂದರ್ಭದಲ್ಲಿ ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಮುಖ್ಯಸ್ಥೆ ಪುಷ್ಪ ಮುನಿರಾಜು ಮತ್ತು ಕುಟುಂಬಸ್ಥರು ,ಡಾ. ಮೂರ್ತಿ, ಶಿವುಪ್ರಸಾದ್, ಸಂದೀಪ್, ಪ್ರದೀಪ್ ಸೇರಿದಂತೆ ಸಂಸ್ಥೆಯ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.