ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಚಿತ್ರದುರ್ಗ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ. ಸಚಿವ ಮುನಿಯಪ್ಪ

ಕರ್ನಾಟಕ ಶೋಷಿತ ಜಾತಿ-ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಚಿತ್ರದುರ್ಗದಲ್ಲಿ ಆಯೋಜಿಸಿದ್ದ “ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಭಾಗವಹಿಸಿದರು.

ಸ್ವಾತಂತ್ರ್ಯಕ್ಕಾಗಿ ಎಲ್ಲ ವರ್ಗದ ಜನರೂ ಪ್ರಾಣ, ಬಲಿದಾನ ಕೊಟ್ಟು, ಜೈಲುವಾಸ ಮಾಡಿ, ಮಹಾತ್ಮಾ ಗಾಂಧೀಜಿ ಅವರ ನಾಯಕತ್ವದಲ್ಲಿ ಜವಾಹರ್‍ಲಾಲ್ ನೆಹರು, ಸುಭಾಷ್ ಚಂದ್ರಬೋಸ್, ವಲ್ಲಭಬಾಯಿ ಪಾಟೇಲ್ ಅಂತಹ ಮಹಾನ್ ಚೇತನರು ಒಂದು ಕನಸು ಕಂಡಿದ್ದರು. ಸಮಾಜ ಸುಧಾರಣೆಯಾಗಬೇಕು.

ಸಂವಿಧಾನದ ಮಹತ್ವ ಸಾರುವ ನಿಟ್ಟಿನಲ್ಲಿ ಈಗಾಗಲೇ ಗಣರಾಜ್ಯೋತ್ಸವದ ದಿನದಂದು ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಗಿದ್ದು, ಜಾಥಾವು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಲಾಗುತ್ತಿದೆ.

ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಗೆ ಆಯವ್ಯಯದಲ್ಲಿ ಶೇ. 24.1 ರಷ್ಟು ಅನುದಾನ ಕೊಟ್ಟು, ಈ ಸಮಾಜದಲ್ಲಿ ಸುಧಾರಣೆ ಮಾಡಲಾಗಿದ್ದು, ಮುಖ್ಯಮಂತ್ರಿಗಳು ಕೈಗೊಂಡ ಈ ತೀರ್ಮಾನದಿಂದ ಶೋಷಿತ ವರ್ಗಗಳಲ್ಲಿ ಎಲ್ಲರೂ ಸಮಾನವಾಗಿ ಬಾಳಲು ಅವಕಾಶ ಸಿಕ್ಕಿದೆ ಎಂದರು.
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ.

ಈ ರಾಷ್ಟ್ರದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಕಂಡುಕೊಳ್ಳಲು ಈ ರಾಷ್ಟ್ರ ಸ್ವಾತಂತ್ರ್ಯ ಪಡೆಯಬೇಕು ಎಂಬ ಮಹಾದಾಸೆ ಹೊಂದಿದ್ದರು ಎಂದು ತಿಳಿಸಿದ ಅವರು, ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಗಾಂಧೀಜಿ, ನೆಹರು ಹಾಗೂ ಹಿರಿಯರು ಸೇರಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಈ ಸಂವಿಧಾನ ಬರೆಯುವ ಅವಕಾಶ ಮಾಡಿಕೊಟ್ಟಾಗ ಜಗತ್ತಿನಲ್ಲಿಯೇ ಅತೀ ಶ್ರೇಷ್ಟವಾದ ಸಂವಿಧಾನವನ್ನು ರಾಷ್ಟ್ರಕ್ಕೆ ನೀಡಿದ್ದಾರೆ. ಈ ರಾಷ್ಟ್ರದ ಕಟ್ಟಕಡೆಯ ವ್ಯಕ್ತಿ ಯಾವುದೇ ಧರ್ಮ, ಜಾತಿ, ಉಪಜಾತಿಯಾಗಲಿ ಅವರೆಲ್ಲರಿಗೂ ಸಮಾನವಾದ ಹಕ್ಕನ್ನು ಸಂವಿಧಾನ ನೀಡಿದೆ ಎಂದರು.


ಸಂವಿಧಾನದ ಮಹತ್ವ ಸಾರುವ ನಿಟ್ಟಿನಲ್ಲಿ ಈಗಾಗಲೇ ಗಣರಾಜ್ಯೋತ್ಸವದ ದಿನದಂದು ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಗಿದ್ದು, ಜಾಥಾವು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಲಾಗುತ್ತಿದೆ. ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಗೆ ಆಯವ್ಯಯದಲ್ಲಿ ಶೇ. 24.1 ರಷ್ಟು ಅನುದಾನ ಕೊಟ್ಟು, ಈ ಸಮಾಜದಲ್ಲಿ ಸುಧಾರಣೆ ಮಾಡಲಾಗಿದ್ದು, ಮುಖ್ಯಮಂತ್ರಿಗಳು ಕೈಗೊಂಡ ಈ ತೀರ್ಮಾನದಿಂದ ಶೋಷಿತ ವರ್ಗಗಳಲ್ಲಿ ಎಲ್ಲರೂ ಸಮಾನವಾಗಿ ಬಾಳಲು ಅವಕಾಶ ಸಿಕ್ಕಿದೆ ಎಂದರು.
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ.

ಸುಮಾರು 25 ರಿಂದ 30 ವರ್ಷಗಳ ಹೋರಾಟದ ವರ್ಗೀಕರಣ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮಾಡಿದ ತೀರ್ಮಾನ ಇತಿಹಾಸದ ಸುವರ್ಣ ಅಕ್ಷರಗಳಲ್ಲಿ ಬರೆಯಬೇಕಾಗುತ್ತದೆ ಎಂದು ತಿಳಿಸಿದ ಅವರು, 25 ರಿಂದ 30 ವರ್ಷಗಳ ಹೋರಾಟದ ಫಲವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸಾಮಾಜಿಕ, ಶೈಕ್ಷಣಿಕ ಸಮಾನತೆಯನ್ನು ಶೋಷಿತ ವರ್ಗಗಳಲ್ಲಿ ಅತೀ ಹಿಂದುಳಿದ, ಅತೀ ಶೋಷಿತವಾದ ವರ್ಗಗಳಿಗೆ ಕೊಡಬೇಕು ಎಂದು ವರ್ಗೀಕರಣ ವಿಷಯವನ್ನು ಜಾರಿಗೆ ತಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದ ಅವರು, ವರ್ಗೀಕರಣ ಇತಿಹಾಸ ಪುಟಗಳಲ್ಲಿ ಸೇರಲಿದೆ.

30 ವರ್ಷಗಳ ಹೋರಾಟಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದಿದ್ದು, ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಎಸ್.ಸಿ, ಎಸ್.ಟಿ ಯಲ್ಲಿನ ನೂರಾರು ಶೋಷಿತ ಸಮಾಜಗಳು ಎಲ್ಲರೂ ಸಮಾನವಾಗಿ ಹಂಚಿಕೊಂಡು ಬಾಳಿ ಬದುಕೋಣ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮಾಗಾಂಧೀಜಿ ಅವರ ಕನಸು ನನಸಾಗಬೇಕಾದರೆ ಶೋಷಿತ ವರ್ಗಗಳಲ್ಲಿನ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಾನತೆ ಕಂಡಾಗ ಅದು ರಾಮರಾಜ್ಯ ಎನಿಸಿಕೊಳ್ಳಲಿದೆ.

ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಣತೊಟ್ಟು ಕೆಲಸ ಮಾಡಿದ್ದು, ಎಲ್ಲ ವರ್ಗದ ಬಡವರಿಗೂ ಸಮಾನವಾದ ಅವಕಾಶ ಮಾಡಿಕೊಡಬೇಕು. ಸಮಾಜ ಕಲ್ಯಾಣ ಇಲಾಖೆ ಮಾತ್ರವಲ್ಲದೇ ಎಲ್ಲ ಇಲಾಖೆಗಳಲ್ಲಿಯೂ ಕೂಡ ಸಮಾನತೆ ಕಾಣುವ ಕಾರ್ಯಕ್ರಮ ಮಾಡಬೇಕು. ಎಲ್ಲ ಸಮಾಜಗಳಲ್ಲಿಯೂ ಕೂಡ ಬಡವರ್ಗದವರಿದ್ದಾರೆ. ಅವರೆಲ್ಲರನ್ನೂ ಒಳಗೊಂಡಂತೆ ಕಾರ್ಯಕ್ರಮ ರೂಪಿಸಿದ್ದು, ಯಾವ ಸಮುದಾಯಗಳು ಶೋಷಿತಕ್ಕೆ ಸಿಕ್ಕಿವೆ ಆಎಲ್ಲಾ ಸಮುದಾಯಗಳನ್ನು ಮೇಲೆತ್ತುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲೆ ಇದೆ. ಇದಕ್ಕಾಗಿ ನಾವು ಸಂಪೂರ್ಣವಾಗಿ ನಿಮಗೆ ಬೆಂಬಲವಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಸಚಿವರಾದ ಹೆಚ್ ಸಿ ಮಹದೇವಪ್ಪ , ಸತೀಷ್ ಜಾರಕಿಹೋಳಿ,ತಿಮ್ಮಾಪುರ್,ಬೋಸರಾಜು,ಸುಧಾಕರ್,ಶಿವರಾಜ್ ತಂಗಡಿಗಿ, ಸಂತೋಷ ಲಾಡ್ ,ಸುರೇಶ್ ಹಾಗೂ
ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಾವಳ್ಳಿ ಶಂಕರ್, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *